alex Certify ಬರೋಬ್ಬರಿ 19 ತಿಂಗಳ ಬಳಿಕ ಸುಪ್ರೀಂ ಕೋರ್ಟ್​ನಲ್ಲಿ ಭೌತಿಕ ವಿಚಾರಣೆ ಆರಂಭ; ಕಲಾಪದಲ್ಲಿ ಭಾಗವಹಿಸಲು ಪತ್ರಕರ್ತರಿಗೂ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 19 ತಿಂಗಳ ಬಳಿಕ ಸುಪ್ರೀಂ ಕೋರ್ಟ್​ನಲ್ಲಿ ಭೌತಿಕ ವಿಚಾರಣೆ ಆರಂಭ; ಕಲಾಪದಲ್ಲಿ ಭಾಗವಹಿಸಲು ಪತ್ರಕರ್ತರಿಗೂ ಅವಕಾಶ

ಹೊಸ ನಿಯಮವನ್ನು ಜಾರಿಗೆ ತಂದಿರುವ ಸುಪ್ರೀಂ ಕೋರ್ಟ್​ ಈ ನಿಯಮದ ಪ್ರಕಾರ ಕೋರ್ಟ್ ರೂಮ್​​ನ ಒಳಗಡೆಯಲ್ಲಿ ನಡೆಯುವ ವಾದ – ವಿವಾದಗಳನ್ನು ಆಲಿಸಲು ಪತ್ರಕರ್ತರಿಗೂ ಅವಕಾಶ ನೀಡಿದೆ. ಕೋರ್ಟ್ ರೂಮಿನ ಒಳಗೆ ಪ್ರವೇಶಿಸುವ ಪತ್ರಕರ್ತರು ಕೋವಿಡ್​ ನಿಯಮಾವಳಿಗಳನ್ನು ಪಾಲಿಸುವುದು ಕಡ್ಡಾಯವಾಗಿರಲಿದೆ ಎಂದು ಹೇಳಿದೆ.

ಇಂದಿನಿಂದ ಸುಪ್ರೀಂಕೋರ್ಟ್​ನಲ್ಲಿ ಭೌತಿಕವಾಗಿ ವಿಚಾರಣೆಗಳು ನಡೆಯಲಿದ್ದು, ಈ ವಿಚಾರಣೆಗೆ ಮಾಧ್ಯಮ ಪ್ರತಿನಿಧಿಗಳಿಗೂ ಹಾಜರಾಗಲು ಅವಕಾಶ ನೀಡಲಾಗಿದೆ. ಆದರೆ ಪತ್ರಕರ್ತರು ಸಾಮಾಜಿಕ ಅಂತರ, ಮಾಸ್ಕ್​ ಬಳಕೆ ಸೇರಿದಂತೆ ವಿವಿಧ ಕೋವಿಡ್​ ನಿಯಮಾವಳಿಗಳನ್ನು ಪಾಲಿಸುವುದು ಕಡ್ಡಾಯವಾಗಿರಲಿದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ಕೊರೊನಾ ಸಾಂಕ್ರಾಮಿಕ ದೇಶದಲ್ಲಿ ಕಾಣಿಸಿಕೊಂಡ ಬಳಿಕ ಕಳೆದ ವರ್ಷ ಮಾರ್ಚ್​ ತಿಂಗಳಿನಿಂದ ಸುಪ್ರೀಂ ಕೋರ್ಟ್ ವಿಡಿಯೋ ಕಾನ್ಫರೆನ್ಸ್​ ಮೂಲಕವೇ ವಿಚಾರಣೆ ನಡೆಸುತ್ತಿದೆ. ಇದೀಗ ಮತ್ತೆ ಸುಪ್ರೀಂ ಕೋರ್ಟ್​ನಲ್ಲಿ ಭೌತಿಕ ವಿಚಾರಣೆ ಆರಂಭವಾದಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...