6 ವರ್ಷದ ಬಾಲಕಿಯನ್ನು ಕೊಲೆಗೈದ ಆರೋಪದ ಅಡಿಯಲ್ಲಿ ಆಸ್ಸಾಂನ ನಾಗಾಂವ್ ಜಿಲ್ಲೆಯ ಪೊಲೀಸರು 8 ರಿಂದ 11 ವರ್ಷದೊಳಗಿನ ಮೂವರು ಬಾಲಕರು ಹಾಗೂ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಎಲ್‌ಐಸಿ ಯ ಈ ʼಮ್ಯೂಚುವಲ್ ಫಂಡ್ʼ ಸ್ಕೀಂ ನಲ್ಲಿ 5 ವರ್ಷಗಳಲ್ಲಿ ದುಪ್ಪಟ್ಟಾಗಿದೆ ಹೂಡಿಕೆದಾರರ ಹಣ
ಬಾಲಕಿಯು ಆರೋಪಿಗಳ ಜೊತೆ ಸೇರಿ ಪಾರ್ನ್ ವಿಡಿಯೋ ನೋಡಲು ನಿರಾಕರಿಸಿದಳು ಎಂಬ ಕಾರಣಕ್ಕೆ ಬಾಲಕಿಯನ್ನು ಕೊಲೆಗೈಯಲಾಗಿದೆ.
ಮಧ್ಯ ಆಸ್ಸಾಂನ ನಾಗಾಂವ್ ಜಿಲ್ಲೆಯ ಕಲ್ಲು ಪುಡಿ ಮಾಡುವ ಗಿರಣಿಯ ಶೌಚಾಲಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಳು. ಉಲೂನಿ ಪೊಲೀಸ್ ಠಾಣೆ ವ್ಯಾಪ್ತಿಯ ನಿಜೋರಿ ಗ್ರಾಮದಲ್ಲಿ ಶೌಚಾಲಯದಲ್ಲಿ ಆರು ವರ್ಷದ ಮಗು ಮಲಗಿದೆ ಎಂದು ಸ್ಥಳೀಯ ಬಾಲಕನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದನು. ಬಳಿಕ ಬಾಲಕಿಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ವೈದ್ಯರು ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಘೋಷಣೆ ಮಾಡಿದ್ದರು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ; ಕೋಕಾ ಕಾಯ್ದೆಯಡಿ ಆರೋಪಿ ವಿರುದ್ಧದ ಕೇಸ್ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು 8 ರಿಂದ 11 ವರ್ಷ ವಯಸ್ಸಿನ ಮೂವರು ಅಪ್ರಾಪ್ತರನ್ನು ಬಂಧಿಸಿದ್ದಾರೆ. ಮೂವರು ಅಪ್ರಾಪ್ತರಲ್ಲಿ ಓರ್ವನ ತಂದೆ ಕೂಡ ಈ ಪ್ರಕರಣದಲ್ಲಿ ಶಾಮೀಲಾಗಿದ್ದು ಆತನನ್ನೂ ಬಂಧಿಸಲಾಗಿದೆ. ಇವರೆಲ್ಲರೂ ಅತಿಯಾಗಿ ನೀಲಿ ಚಿತ್ರ ವೀಕ್ಷಿಸುತ್ತಿದ್ದರು ಎನ್ನಲಾಗಿದೆ.
ಮೂವರು ಬಾಲಾಪರಾಧಿಗಳು ಬಾಲಕಿಯ ಮನೆಯ ಸಮೀಪದಲ್ಲೇ ವಾಸವಿದ್ದು ತಮ್ಮ ಮೊಬೈಲ್ನಲ್ಲಿ ನೀಲಿ ಚಿತ್ರವನ್ನು ವೀಕ್ಷಿಸುತ್ತಿದ್ದರು. ಬಾಲಕಿಗೂ ನೀಲಿ ಚಿತ್ರ ವೀಕ್ಷಿಸುವಂತೆ ಒತ್ತಡ ಹೇರಿದ್ದಾರೆ. ಇದಕ್ಕೆ ಬಾಲಕಿ ಒಪ್ಪದ ಕಾರಣ ಆಕೆಯನ್ನು ಕಲ್ಲಿನಿಂದ ಹೊಡೆದು ಸಾಯಿಸಿದ್ದಾರೆ. ಅಲ್ಲದೇ ಈ ಮೂವರು ಅಪ್ರಾಪ್ತರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.