ಬಿಎಸ್ಎನ್ಎಲ್, ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. 100 ರೂಪಾಯಿಗಿಂತ ಕಡಿಮೆ ಬೆಲೆಯ ಮೂರು ಪ್ರಿಪೇಯ್ಡ್ ಪ್ಲಾನ್‌ಗಳ ಬೆಲೆಯನ್ನು ಸುಮಾರು 2 ರೂಪಾಯಿಯಷ್ಟು ಕಡಿಮೆ ಮಾಡಿದೆ. 56 ರೂಪಾಯಿ, 57 ರೂಪಾಯಿ ಮತ್ತು 58 ರೂಪಾಯಿ ಯೋಜನೆಯ ಬೆಲೆಯನ್ನು 2 ರೂಪಾಯಿ ಇಳಿಸಿದೆ.
ಬಿಎಸ್ಎನ್ಎಲ್ ಈ ಯೋಜನೆ ಬೆಲೆ ಇಳಿಕೆ ಮಾಡಿದೆ. ಆದ್ರೆ ಡೇಟಾ ಸೇರಿದಂತೆ ಬೇರೆ ಯಾವುದೇ ಪ್ರಯೋಜನದಲ್ಲಿ ಬದಲಾವಣೆ ಮಾಡಿಲ್ಲ. ಪ್ರಿಪೇಯ್ಡ್ ಯೋಜನೆಗಳ ಹೊಸ ಬೆಲೆ ಅಕ್ಟೋಬರ್ 18ರಿಂದ ಜಾರಿಗೆ ಬಂದಿವೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ’ಟೆಸ್ಟ್ ಡ್ರೈವ್ ’ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಡಿಟೇಲ್ಸ್
ಬಿಎಸ್ಎನ್ಎಲ್ 56 ರೂಪಾಯಿ ಯೋಜನೆ ಈಗ 54 ರೂಪಾಯಿಗೆ ಲಭ್ಯವಾಗಲಿದೆ. 8 ದಿನಗಳ ಸಿಂಧುತ್ವ ಮತ್ತು 5600 ಸೆಕೆಂಡುಗಳ ಕರೆ ಸೌಲಭ್ಯ ಇದ್ರಲ್ಲಿ ಸಿಗಲಿದೆ. ಬಿಎಸ್ಎನ್ಎಲ್ 57 ರೂಪಾಯಿ ಯೋಜನೆ ಬೆಲೆ 56 ರೂಪಾಯಿಯಾಗಿದೆ. ಇದ್ರಲ್ಲಿ 10 ಜಿಬಿ ಡೇಟಾ ಮತ್ತು ಜಿಂಗ್ ಎಂಟರ್‌ಟೈನ್‌ಮೆಂಟ್ ಮ್ಯೂಸಿಕ್‌ಗೆ ಉಚಿತ ಚಂದಾದಾರಿಕೆ ಸಿಗಲಿದೆ. ಇದ್ರ ವ್ಯಾಲಿಡಿಟಿ 10 ದಿನಗಳು.
ಬೆರಗಾಗಿಸುವಂತಿದೆ 1 ವರ್ಷದ ಕಂದನ ತಿಂಗಳ ಗಳಿಕೆ…!
ಇನ್ನು ಬಿಎಸ್ಎನ್ಎಲ್ ನ 58 ರೂಪಾಯಿ ಯೋಜನೆ 57 ಕ್ಕೆ ಇಳಿದಿದೆ. ಈ ಯೋಜನೆಯನ್ನು ಪ್ರಿಪೇಯ್ಡ್ ಅಂತರಾಷ್ಟ್ರೀಯ ರೋಮಿಂಗ್ ಪ್ಯಾಕ್ ಸಕ್ರಿಯಗೊಳಿಸಲು ಅಥವಾ ವಿಸ್ತರಿಸಲು ಬಳಸಲಾಗುತ್ತದೆ.