ಅಮೆಜಾನ್, ಫ್ಲಿಪ್ಕಾರ್ಟ್ಗಳಲ್ಲಿ ಹಬ್ಬದ ಋುತು ಅಂಗವಾಗಿ ಸಾಲುಸಾಲು ’ಮಹಾ ಮಾರಾಟ ಮೇಳ’ ಆಯೋಜನೆ ಆಗುತ್ತಿವೆ. ಇಂಥ ವೇಳೆ ಏನನ್ನೋ ಹುಡುಕುತ್ತಾ ಇರುವವರಿಗೆ ಮತ್ತೇನೋ ಅಗತ್ಯ ವಸ್ತು ಆನ್ಲೈನ್ ವೇದಿಕೆಯಲ್ಲಿ ಗೋಚರಿಸಿದಾಗ ಖರೀದಿಗೆ ಮುಂದಾಗುತ್ತಾರೆ. ಆದರೆ ಕೂಡಲೇ ಎಚ್ಚರಗೊಂಡು ಹಿಂಜರಿಯುತ್ತಾರೆ. ಯಾಕೆಂದರೆ, ಅವರ ಬಳಿ ಸಾಕಷ್ಟು ಹಣ ಇರಲ್ಲ. ಕ್ರೆಡಿಟ್ ಕಾರ್ಡ್ ಕೂಡ ಇರಲ್ಲ.
ಇಂಥ ಪರಿಸ್ಥಿತಿ ಎದುರಿಸುವ ಗ್ರಾಹಕರ ಅನುಕೂಲಕ್ಕಾಗಿ ಅಮೆಜಾನ್, ಫ್ಲಿಪ್ಕಾರ್ಟ್ಗಳು ’ ಬೈ ನೌವ್, ಪೇ ಲೇಟರ್’ ಎಂಬ ಹೊಸ ಆಯ್ಕೆ ಪರಿಚಯಿಸಿವೆ. ಇದನ್ನು ಕ್ರೆಡಿಟ್ ಕಾರ್ಡ್ಗೆ ಪರ್ಯಾಯ ಅಥವಾ ಸಾಲ ಮಾಡಿ ವಸ್ತು ಖರೀದಿ, ಲೋನ್ ಮೇಲೆ ಖರೀದಿ ಎಂದು ಕೂಡ ಕರೆಯಬಹುದು.
ಕೊಬ್ಬರಿ ಬೆಳೆಗಾರರಿಗೆ ಬಂಪರ್
ಒಟ್ಟಾರೆ ಬಿಲ್ನ ಸ್ವಲ್ಪ ಪ್ರಮಾಣದ ಮೊತ್ತ ಅಥವಾ ಡೌನ್ ಪೇಮೆಂಟ್ ರೂಪದಲ್ಲಿ ನಗದು ಪಾವತಿಸಿದರೆ ’ಬೈ ನೌವ್’ ಪೂರ್ಣಗೊಳ್ಳುತ್ತದೆ. ವಸ್ತುವು ನಿಮ್ಮ ಕೈಗೆ ಬಂದು ಸೇರುತ್ತದೆ. ಬಳಿಕ ನಿಗದಿತ ಸಮಯವನ್ನು ಮಾರಾಟಗಾರರು ಕೊಡುತ್ತಾರೆ. ಅಂದರೆ 1 ವಾರ ಅಥವಾ 10 ದಿನಗಳು ಎಂದುಕೊಳ್ಳಿರಿ.
ಅದರೊಳಗೆ ಬಾಕಿ ಮೊತ್ತವನ್ನು ಪಾವತಿಸಬಹುದು.’ ಪೇ ಲೇಟರ್’ ಆಯ್ಕೆ ಕೂಡ ಇಲ್ಲಿಗೆ ಪೂರ್ಣಗೊಳ್ಳುತ್ತದೆ. ಆದರೆ, ಒಂದು ಎಚ್ಚರವಿರಲಿ ನಿಗದಿತ ಸಮಯಕ್ಕೆ ಬಾಕಿ ಮೊತ್ತ ಪಾವತಿ ಮಾಡದಿದ್ದರೆ ಮಾತ್ರ ಶೇ.24ರಷ್ಟು ಬಡ್ಡಿಯನ್ನು ಪಾವತಿಸುವ ಗೋಜಿಗೆ ಸಿಲುಕಿಕೊಳ್ಳುತ್ತೀರಿ. ಹಾಗಾಗಿ ಜವಾಬ್ದಾರಿಯಿಂದ ಮಾತ್ರವೇ ಈ ಆಯ್ಕೆಯನ್ನು ಗ್ರಾಹಕರು ಬಳಸುವುದು ಸೂಕ್ತ.
ಬಹುತೇಕ ಸೇವಾದಾರರು 15-20 ದಿನಗಳ ಅಂತರದವರೆಗೆ ಬಾಕಿ ಮೊತ್ತದ ಮೇಲೆ ಬಡ್ಡಿ ಹೇರಿಕೆ ಮಾಡಲ್ಲ. ಜತೆಗೆ ಗ್ರಾಹಕರು ಬಾಕಿ ಉಳಿಸಿಕೊಳ್ಳುವ ಮೊತ್ತವು 20 ಸಾವಿರದಿಂದ 1 ಲಕ್ಷ ರೂ. ಒಳಗೆ ಇರಬೇಕು ಎಂದು ಷರತ್ತು ವಿಧಿಸುತ್ತವೆ.