ಎಲೆಕ್ಟ್ರಿಕ್ ಸ್ಕೂಟರ್‌ಗಳ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ ಎಂದು ನಿರೀಕ್ಷೆ ಮೂಡಿಸಿರುವ ಓಲಾ ಕಂಪನಿಯ ’ಎಸ್1’ ಹಾಗೂ ’ಎಸ್1 ಪ್ರೊ’ ಸ್ಕೂಟರ್ ಗಳನ್ನು ಕೋಟಿಗಟ್ಟಲೆ ಭಾರತೀಯರು ಮುಂಚಿತವಾಗಿಯೇ ಬುಕ್ ಮಾಡಿಕೊಂಡು ಕಾಯುತ್ತಿದ್ದಾರೆ. 2022 ರ ಜನವರಿಯಿಂದ ಸ್ಕೂಟರ್ ಗಳು ಜನರಿಗೆ ತಲುಪಲು ಆರಂಭವಾಗಲಿದೆ ಎಂದು ಕಂಪನಿ ಈಗಾಗಲೇ ಹೇಳಿದೆ.
ಆದರೆ ಬಹಳ ಆಕರ್ಷಕ ವಿನ್ಯಾಸದ, ಅತಿ ವೇಗವಾದ ಓಲಾ ಸ್ಕೂಟರ್‌ಗಳ ಟೆಸ್ಟ್ ಡ್ರೈವ್ ಯಾವಾಗ ಕೊಡುತ್ತೀರಿ ಎಂದು ಲಕ್ಷಾಂತರ ಮಂದಿ ಕಂಪನಿಗೆ ಮೇಲಿಂದ ಮೇಲೆ ಪ್ರಶ್ನೆ ಕೇಳುತ್ತಿದ್ದರು. ಜನರ ಮನಃಸ್ಥಿತಿಯನ್ನು ಅರಿತ ಕಂಪನಿಯು ’ಓಲಾ ಎಸ್1 ’ ಮತ್ತು ’ಓಲಾ ಎಸ್1 ಪ್ರೊ’ ಸ್ಕೂಟರ್‌ಗಳ ಟೆಸ್ಟ್ ಡ್ರೈವ್ ಲಭ್ಯತೆ ದಿನಾಂಕವನ್ನು ಕಡೆಗೂ ಘೋಷಿಸಿದೆ.
ನವೆಂಬರ್ 10ರಿಂದ ಮೆಟ್ರೋ ನಗರಗಳು ಮತ್ತು ಪ್ರಮುಖ ನಗರಗಳಲ್ಲಿ ಮಾತ್ರವೇ ಓಲಾ ಸ್ಕೂಟರ್‌ಗಳು ಪೂರ್ವ ನೋಂದಣಿ ವ್ಯವಸ್ಥೆ ಅಡಿಯಲ್ಲಿ ’ಟೆಸ್ಟ್ ಡ್ರೈವ್ ’ ಗೆ ಲಭ್ಯವಾಗಲಿವೆ. ಈಗಾಗಲೇ ಸ್ಕೂಟರ್ ಬುಕ್ ಮಾಡಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು ಎನ್ನಲಾಗುತ್ತಿದ್ದರೂ, ಸ್ಪಷ್ಟವಾಗಿಲ್ಲ.
ಶ್ವಾನಗಳಿಗೆ ಮಾಂಸಹಾರ ಹಾಕದಿದ್ರೆ ಅಂತವರಿಗೆ ಈ ದೇಶದಲ್ಲಿ ಜೈಲೂಟ ಫಿಕ್ಸ್..!
ಸದ್ಯಕ್ಕೆ ಅಡ್ವಾನ್ಸ್ ಮೊತ್ತ ಮಾತ್ರವೇ ನೀಡಿ ಬುಕ್ಕಿಂಗ್‌ಗೆ ಓಲಾ ಕಂಪನಿಯು ಅವಕಾಶ ಮಾಡಿಕೊಟ್ಟಿದೆ. ಟೆಸ್ಟ್ ಡ್ರೈವ್ ಮಾಡಿದ ದಿನಗಳಂದೇ ಬಾಕಿ ಮೊತ್ತ ಪಾವತಿಗೂ ಕೂಡ ಗ್ರಾಹಕರಿಗೆ ಕಂಪನಿ ಅವಕಾಶ ಒದಗಿಸಲಿದೆ. ಅಗತ್ಯವಾಗಿ ಚಾಲನಾ ಪರವಾನಗಿಯನ್ನು ತೋರಿಸಿದವರಿಗೆ ಮಾತ್ರವೇ ಟೆಸ್ಟ್ ಡ್ರೈವ್ ಭಾಗ್ಯ ಲಭ್ಯವಾಗಲಿದೆ.
ಸೆಪ್ಟೆಂಬರ್‌ನಲ್ಲಿ ಓಲಾ ಸ್ಕೂಟರ್ ಬುಕ್ಕಿಂಗ್ ಆರಂಭವಾದ ಎರಡೇ ದಿನಗಳಲ್ಲಿ ಅಡ್ವಾನ್ಸ್ ಮೊತ್ತವೇ ಸುಮಾರು 1,100 ಕೋಟಿ ರೂ. ಕಂಪನಿಗೆ ಸಂಗ್ರಹವಾಗಿದೆ. ಇದು ದೇಶದ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಕ್ಷೇತ್ರದ ದಾಖಲೆ ಕೂಡ ಎನಿಸಿದೆ.
ಚಾಮುಂಡಿ ಬೆಟ್ಟದ ನಂದಿಬೆಟ್ಟ ಮಾರ್ಗದಲ್ಲಿ ಭೂಕುಸಿತ: ಮೈಸೂರು, ಮಂಡ್ಯದಲ್ಲಿ ಅವಾಂತರ ಸೃಷ್ಠಿಸಿದ ಮಳೆ, ಜನಜೀವನ ಅಸ್ತವ್ಯಸ್ತ
ನವೆಂಬರ್ 1 ರಿಂದ ಓಲಾ ಸ್ಕೂಟರ್ ಖರೀದಿಗೆ ಪುನಃ ಕಂಪನಿಯು ಅವಕಾಶ ನೀಡಲಿದೆ. ಆಸಕ್ತರು ಓಲಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಹೆಸರು, ಫೋನ್ ನಂಬರ್ ಮೂಲಕ ನೋಂದಣಿ ಮಾಡಿಕೊಂಡರೆ ಸಾಕಾಗುತ್ತದೆ. ಸ್ಕೂಟರ್ ಬಣ್ಣ, ವೈಶಿಷ್ಟ್ಯತೆಗಳನ್ನು ನಿರ್ಧರಿಸಿದ ಬಳಿಕ 20 ಸಾವಿರ ರೂ. ಅಡ್ವಾನ್ಸ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಲು ಅವಕಾಶವಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 181 ಕಿ.ಮೀ. ವರೆಗೆ ಕ್ರಮಿಸಬಹುದು ಎನ್ನಲಾಗುತ್ತಿರುವ ಓಲಾ ಎಸ್1 ಸ್ಕೂಟರ್‌ನ ಬೆಲೆಯು 85,099 ರೂ.ನಿಂದ 1.10 ಲಕ್ಷ ರೂ. (ಎಕ್ಸ್‌ಶೋರೂಂ- ದಿಲ್ಲಿ) ಎಂದು ಕಂಪನಿ ಹೇಳಿದೆ.