ಮದುವೆ ಸಮಾರಂಭಗಳು ಅದೆಷ್ಟು ವಿನೋದಮಯವಾಗಿರುತ್ತವೋ ಅಷ್ಟೇ ದಣಿವು ತರಬಲ್ಲ ಸಾಧ್ಯತೆಯೂ ಇರುತ್ತವೆ. ಕೆಲವೊಮ್ಮೆ ಇದೇ ಸಂಭ್ರಮದ ವೇಳೆ ಮಜುಗರ ತರಬಲ್ಲ ಸಾಕಷ್ಟು ಘಟನೆಗಳು ದಾಖಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ತೇಲಾಡುತ್ತಿರುತ್ತವೆ.
ಬೆರಗಾಗಿಸುವಂತಿದೆ 1 ವರ್ಷದ ಕಂದನ ತಿಂಗಳ ಗಳಿಕೆ…!
ಇಂಥದ್ದೇ ಘಟನೆಯೊಂದರಲ್ಲಿ ನವದಂಪತಿಗಳಿಬ್ಬರು ಮಂಟಪದ ಮೇಲೆ ನೃತ್ಯ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಸುತ್ತಲಿದ್ದ ಅತಿಥಿಗಳು ಇಬ್ಬರ ಈ ನೃತ್ಯಕ್ಕೆ ಕೇಕೆ, ಚಪ್ಪಾಳೆ ಹಾಕುತ್ತಿದ್ದರೆ, ವಧೂವರರು ಪರಸ್ಪರರ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡು ಮಸ್ತ್ ನೃತ್ಯ ಮಾಡುತ್ತಿದ್ದಾರೆ.
ಇದೇ ವೇಳೆ ನವವಿವಾಹಿತರು ಆಯ ತಪ್ಪಿ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ. ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಶೇರ್ ಆಗಿದ್ದು ಭಾರೀ ಪ್ರತಿಕ್ರಿಯೆಗಳನ್ನು ಗಿಟ್ಟಿಸಿದೆ.
https://www.youtube.com/watch?v=B6DGwKtth0w