ಪ್ರತಿಭೆಗಳ ಅನ್ವೇಷಣೆ ಹಾಗೂ ಉದ್ಯೋಗಿಗಳನ್ನು ಉಳಿಸಿಕೊಳ್ಳುವಲ್ಲಿ ಭಾರೀ ಸಾಹಸ ಮಾಡುತ್ತಿರುವ ಕಂಪನಿಗಳು 2022ರಲ್ಲಿ ತಮ್ಮ ಉದ್ಯೋಗಿಗಳಿಗೆ ವೇತನದಲ್ಲಿ 9.3%ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ.
2021ರ ವಿತ್ತೀಯ ವರ್ಷದಲ್ಲಿ ಸರಾಸರಿ ವೇತನದಲ್ಲಿ 8% ಏರಿಕೆ ನೀಡಿದ್ದ ಕಂಪನಿಗಳು ಮುಂದಿನ ವಿತ್ತೀಯ ವರ್ಷದಿಂದ ಸರಾಸರಿ ವೇತನದ ಮೇಲೆ 9.3% ಹೆಚ್ಚಳ ಮಾಡುವ ನಿರೀಕ್ಷೆ ಇದೆ ಎಂದು ಜಾಗತಿಕ ಸಲಹೆ, ಬ್ರೋಕಿಂಗ್ ಮತ್ತು ಪರಿಹಾರಗಳ ಕಂಪನಿ ವಿಲ್ಲಿಸ್ ಟವರ್ಸ್ ವ್ಯಾಟ್ಸನ್‌ನ ’ಸ್ಯಾಲರಿ ಬಜೆಟ್ ಪ್ಲಾನಿಂಗ್’ ವರದಿಯಲ್ಲಿ ತಿಳಿಸಲಾಗಿದೆ.
BREAKING NEWS: ವಾಹನ ಸವಾರರಿಗೆ ಮತ್ತೆ ಶಾಕ್; ಇಂದೂ ಏರಿಕೆಯಾಯ್ತು ಪೆಟ್ರೋಲ್, ಡೀಸೆಲ್ ದರ
ಮುಂದಿನ 12 ತಿಂಗಳ ಅವಧಿಯಲ್ಲಿ ಉದ್ಯಮದಲ್ಲಿ ಸುಧಾರಣೆ ಕಂಡುಬರುವ ಭರವಸೆ ಇರುವ ಕಾರಣ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿಯೇ ಅತ್ಯಂತ ಹೆಚ್ಚಿನ ವೇತನದೇರಿಕೆ ಭಾರತದಲ್ಲಿ ಆಗುವ ನಿರೀಕ್ಷೆಯನ್ನು ವರದಿಯಲ್ಲಿ ನೀಡಲಾಗಿದೆ.
ಮೇ ಹಾಗೂ ಜೂನ್ 2021ರಲ್ಲಿ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ, 13 ಮಾರುಕಟ್ಟೆಗಳಲ್ಲಿ ವಿವಿಧ ಕ್ಷೇತ್ರಗಳ 1045ರಷ್ಟು ಕಂಪನಿಗಳಲ್ಲಿ ತನ್ನ ದ್ವೈವಾರ್ಷಿಕ ಸರ್ವೇಯೊಂದನ್ನು ನಡೆಸಿದ ವಿಲ್ಲಿಸ್ ಟವರ್ಸ್ ವ್ಯಾಟ್ಸನ್ ತನ್ನ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ 435 ಕಂಪನಿಗಳೂ ಸೇರಿವೆ.
ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್: ಹೆಚ್ಚಾಗಲಿದೆ ತೆರಿಗೆ ಹೊರೆ
ತಾನು ಸಮೀಕ್ಷೆ ನಡೆಸಿದ ಭಾರತೀಯ ಕಂಪನಿಗಳ ಪೈಕಿ 52.2% ನಷ್ಟು ಕಂಪನಿಗಳು ಮುಂದಿನ 12 ತಿಂಗಳುಗಳಲ್ಲಿ ಸಕಾರಾತ್ಮಕ ಪ್ರಗತಿ ಸಾಧಿಸುವ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿವೆ. ಇದರಿಂದಾಗಿ ಇದೇ ಕಾಲಘಟ್ಟದಲ್ಲಿ ಹೈರಿಂಗ್ ಪ್ರಮಾಣವನ್ನೂ ಸಹ ಕಂಪನಿಗಳು ಏರಿಸಲಿದ್ದು, 2020ಕ್ಕಿಂತಲೂ ಮುಂದಿನ 12 ತಿಂಗಳ ಅವಧಿಯಲ್ಲಿ ಮೂರು ಪಟ್ಟು ಹೆಚ್ಚಿನ ಹೈರಿಂಗ್ ಮಾಡಲು ಮುಂದಾಗಿವೆ.
ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ತಾಂತ್ರಿಕ ಕೌಶಲ್ಯಾಧಾರಿತ ವಹಿವಾಟುಗಳು, ಸೇಲ್ಸ್ ಹಾಗೂ ಫೈನಾನ್ಸ್ ಕ್ಷೇತ್ರಗಳಲ್ಲಿ ಹೆಚ್ಚಿನ ಹೈರಿಂಗ್ ಚಟುವಟಿಕೆಗಳು ಇರಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.