ಸೆಪ್ಟೆಂಬರ್‌ನ ದಿನವೊಂದರಲ್ಲಿ ಒಡಿಶಾದ ನುವಾಪಾಡಾ ಜಿಲ್ಲೆಯ ಧರ್ಮಬಂಧಾ ಗ್ರಾಮದ ಮಹಿಳೆಯರ ಸಮೂಹವೊಂದು ಕಾಲುವೆಯೊಂದರಲ್ಲಿ ಸಾಮೂಹಿಕ ಸ್ನಾನಕ್ಕೆ ತೆರಳಿದೆ. ಇದೇ ವೇಳೆ ಹತ್ತಿರದ ಮದ್ಯದಂಗಡಿಯಲ್ಲಿ ಪಾನಮತ್ತರಾಗಿ ಬಂದ ಪುರುಷರ ಗುಂಪೊಂದು ಕುಡಿತದ ಮತ್ತಿನಲ್ಲಿ ಸ್ತ್ರೀಯರನ್ನು ಚುಡಾಯಿಸಲು ಶುರು ಮಾಡಿದೆ.
ಇದನ್ನು ಪ್ರತಿರೋಧಿಸಿದ ಮಹಿಳೆಯರ ವಿರುದ್ಧ ಅಸಭ್ಯ ಪದಗಳ ಪ್ರಯೋಗ ಮಾಡಿದ ಪುರುಷರ ಗುಂಪಿನ ಮೇಲೆ ಪೊಲೀಸ್ ದೂರು ದಾಖಲಿಸಲಾಯಿತು. ಇದಾದ ಬಳಿಕ ಈ ಸಮಸ್ಯೆಯನ್ನು ಬುಡದಿಂದಲೇ ಕಿತ್ತೊಗೆಯಲು ಗ್ರಾಮದ ಯುವಕರು ನಿರ್ಧರಿಸಿದರು. ಇದರ ಬೆನ್ನಿಗೇ ಧರ್ಮಬಂಧಾ ಗ್ರಾಮದಲ್ಲಿ ಕುಡಿತದ ಚಟದಿಂದ ಬಿಡಿಸುವ ಅಭಿಯಾನ ಆರಂಭಗೊಂಡಿತು.
ಬೆಟ್ಟದ ನೆಲ್ಲಿಯಲ್ಲಿದೆ ಹಲವು ʼಆರೋಗ್ಯʼಕರ ಪ್ರಯೋಜನ
“ಆ ಅಹಿತಕರ ಘಟನೆ ನಡೆದ ದಿನ ನಾನೂ ಸಹ ಕಾಲುವೆ ಬಳಿ ಇದ್ದೆ. ಅಲ್ಲಿ ಮದ್ಯ ಮಾರಾಟದ ವಿರುದ್ಧ ನಾನು ಯಾವಾಗಲೂ ದನಿ ಏರಿಸುತ್ತಲೇ ಇದ್ದೆ. ಆದರೆ ಯಾರೂ ಸಹ ಇದಕ್ಕೆ ಒಪ್ಪಿರಲಿಲ್ಲ. ಆದರೆ ಈ ಘಟನೆ ಬಳಿಕ ಗ್ರಾಮಸ್ಥರೆಲ್ಲಾ ಸಭೆ ಸೇರಿ, ಅದರಲ್ಲಿ ಮಹಿಳೆಯರನ್ನೂ ಒಳಗೊಂಡು, ಮದ್ಯ ಮಾರಾಟದ ನಿಷೇಧದ ನಿರ್ಧಾರ ತೆಗೆದುಕೊಳ್ಳಲಾಯಿತು,” ಎಂದು ಗ್ರಾಮಸ್ಥೆ ಪದ್ಮಾ ದೇವಂಗನ್ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ 20 ಕಿಮೀ ದೂರದಲ್ಲಿರುವ ಧರ್ಮಬಂಧಾದಲ್ಲಿ 6,000 ನಿವಾಸಿಗಳು ವಾಸಿಸುತ್ತಿದ್ದು, ಇಲ್ಲಿನ ಯಾವುದೇ ರೀತಿಯ ಮದ್ಯ ಮಾರಾಟ ಹಾಗೂ ಉತ್ಪಾದನೆಯನ್ನು ನಿಷೇಧಿಸಲಾಗಿದೆ. ಯಾರಾದರೂ ಮದ್ಯ ಮಾರಾಟ ಮಾಡುತ್ತಾ ಸಿಕ್ಕಿಬಿದ್ದಲ್ಲಿ ಅವರಿಗೆ 51,000 ರೂ.ಗಳ ದಂಡ ವಿಧಿಸಿ, ಪಾದರಕ್ಷೆಗಳ ಹಾರವನ್ನು ಅಂಥವರ ಮೈಮೇಲೆ ಹಾಕಿ ಊರೆಲ್ಲಾ ಮರೆವಣಿಗೆ ಮಾಡಿಸುವ ಶಿಕ್ಷೆ ವಿಧಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಮದ್ಯ ಖರೀದಿ ಮಾಡಿ ಸಿಕ್ಕಿ ಬೀಳುವ ಗ್ರಾಮಸ್ಥನಿಗೆ 5,100 ರೂ.ಗಳ ದಂಡ ವಿಧಿಸಲಾಗುವುದು.
ಮದುವೆಯಾಗುವ ಖುಷಿಯಲ್ಲಿ ಮಂಟಪಕ್ಕೆ ಸ್ವತಃ ಕಾರು ಚಲಾಯಿಸಿಕೊಂಡು ಬಂದ ವಧು
ಈ ನಿಷೇಧಾಜ್ಞೆಯನ್ನು ಅನುಷ್ಠಾನಕ್ಕೆ ತರಲೆಂದು 25 ಪುರುಷರು ಹಾಗೂ 25 ಮಹಿಳೆಯರ ಕ್ರಿಯಾ ಸಮಿತಿಯನ್ನು ರಚಿಸಲಾಗಿದೆ. ಇವರಿಗೆ ಐದು ಹಿರಿಯ ಮಂದಿಯ ನಿರ್ದೇಶನವಿರುತ್ತದೆ. ಈ ಸಮಿತಿಯು ಮದ್ಯ ಮಾರಾಟದ ಮಾಹಿತಿ ಸಿಕ್ಕ ಕೂಡಲೇ ರೇಡ್ ಮಾಡುವ ಅಧಿಕಾರ ಹೊಂದಿದೆ.