ಬೆಂಗಳೂರು: ರಾಜ್ಯ ಸರ್ಕಾರ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮಂಡ್ಯ ಎಸ್ಪಿ ಆಗಿ ಡಾ. ಸುಮನ್ ಡಿ. ಪೆನ್ನೇಕರ್, ರಾಯಚೂರು ಎಸ್ಪಿಯಾಗಿ ಬಿ. ನಿಖಿಲ್, ಕಲಬುರ್ಗಿ ಬಿ ಸಬ್ ಡಿವಿಜನ್ ಎಸ್ಪಿಯಾಗಿ ಎಂ.ಎನ್. ದೀಪನ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ನಕ್ಸಲ್ ನಿಗ್ರಹ ದಳ ಎಸ್ಪಿಯಾಗಿ ನಿಕಮ್ ಪ್ರಕಾಶ್ ಅಮ್ರಿತ್, ಪೊಲೀಸ್ ತರಬೇತಿ ಇಲಾಖೆ ಪ್ರಾಂಶುಪಾಲರಾಗಿ ಕರುಣಾಗರನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಉತ್ತರ ವಿಭಾಗದ ಟ್ರಾಫಿಕ್ ಡಿಸಿಪಿಯಾಗಿ ಸವಿತಾ, ಎಐಜಿಪಿ ಹೆಡ್ ಕ್ವಾಟರ್ಸ್ ಆಗಿ ಅಶ್ವಿನಿ ಅವರನ್ನು ವರ್ಗಾವಣೆ ಮಾಡಲಾಗಿದೆ.