ಡೇಟಿಂಗ್ ಆಪ್ಗಳನ್ನು ಬಳಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕವಂತೂ ಅನೇಕರು ಇಂತಹ ಆಪ್ಗಳ ಮೊರೆ ಹೋಗ್ತಿದ್ದಾರೆ. ಇದೇ ರೀತಿ ಡೇಟಿಂಗ್ ಆಪ್ ಮೂಲಕ ವ್ಯಕ್ತಿಯೊಬ್ಬನ ಪರಿಚಯ ಮಾಡಿಕೊಂಡಿದ್ದ 37 ವರ್ಷದ ಮಹಿಳೆಯು ಬರೋಬ್ಬರಿ 18 ಲಕ್ಷ ರೂಪಾಯಿಯನ್ನು ಕಳೆದುಕೊಂಡ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ. ಆಸ್ಟಿನ್ ಟೌನ್ ನಿವಾಸಿಯಾದ ಮಹಿಳೆಯು ಈ ಸಂಬಂಧ ಪೊಲೀಸರಿಗೆ ದೂರನ್ನು ನೀಡಿದ್ದಾರೆ.
SHOCKING NEWS: ದೇಶವನ್ನೇ ಬೆಚ್ಚಿ ಬೀಳಿಸಿದ ಮತ್ತೊಂದು ಘಟನೆ; ಯುವತಿಗೆ ಡ್ರಗ್ಸ್ ನೀಡಿ ಪೈಶಾಚಿಕ ಕೃತ್ಯ
ಡೇಟಿಂಗ್ ಆ್ಯಪ್ನ ಮೂಲಕ ಸೆಪ್ಟೆಂಬರ್ 30ರಂದು ಈ ಮಹಿಳೆಯು ವ್ಯಕ್ತಿಯೊಬ್ಬನ ಪರಿಚಯ ಮಾಡಿಕೊಂಡಿದ್ದಳು. ತಾನು ವಿದೇಶದಲ್ಲಿ ನೆಲೆಸಿದ್ದೇನೆಂದು ಹೇಳಿಕೊಂಡಿದ್ದ ವ್ಯಕ್ತಿಯು ಈಕೆಯನ್ನು ವಿವಾಹವಾಗಲು ತನಗೆ ಆಸಕ್ತಿ ಇದೆ ಎಂದು ಹೇಳಿದ್ದಾನೆ. ಹೀಗಾಗಿ ಕೆಲವೇ ದಿನಗಳಲ್ಲಿ ನಿನ್ನನ್ನು ಭೇಟಿಯಾಗಲು ಬರೋದಾಗಿಯೂ ಹೇಳಿದ್ದ ಎನ್ನಲಾಗಿದೆ.
ʼಮಾನ್ಸೂನ್ʼ ಮುಗಿದರೂ ಈ ಪ್ರಮಾಣದಲ್ಲಿ ಮಳೆಯಾಗುತ್ತಿರುವುದೇಕೆ…?
ಆದರೆ ಇದಾದ ಬಳಿಕ ತನಗೆ ಕೊಂಚ ಆರ್ಥಿಕ ಸಂಕಷ್ಟ ಉಂಟಾಗಿದೆ ಎಂದಿದ್ದ ವ್ಯಕ್ತಿಯು ಈ ಮಹಿಳೆಯ ಬಳಿಕ ಹಣ ನೀಡುವಂತೆ ಕೇಳಿದ್ದ. ಆತನ ಮಾತನ್ನು ನಂಬಿದ್ದ ಮಹಿಳೆಯು ಒಟ್ಟು 18,29,700 ರೂಪಾಯಿಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಕೆಲ ದಿನಗಳ ಬಳಿಕ ತನಗೆ ವಂಚನೆಯಾಗಿದೆ ಎಂಬ ವಿಚಾರ ಮಹಿಳೆಯ ಗಮನಕ್ಕೆ ಬಂದಿದೆ. ಈ ಸಂಬಂಧ ಮಹಿಳೆಯು ದೂರನ್ನು ದಾಖಲಿಸಿದ್ದು ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.