18 ತಿಂಗಳಿಗಿಂತ ಹೆಚ್ಚು ಕಾಲ ಲಾಕ್‌ಡೌನ್ ಮತ್ತು ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಇದೀಗ ನಿಯಮವನ್ನು ಸರ್ಕಾರ ಕೊಂಚ ಸಡಿಲಗೊಳಿಸಿದೆ. ಈ ಕಾರಣದಿಂದಾಗಿ ದುರ್ಗಾ ಪೂಜೆಯ ಸಮಯದಲ್ಲಿ ಕೋಲ್ಕತ್ತಾದ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಜನದಟ್ಟಣೆ ಕಂಡುಬಂದಿದೆ.
ರೆಸ್ಟೋರೆಂಟ್ ಗಳಲ್ಲಿ ಜನರ ಪ್ರವಾಹವೇ ಹರಿದುಬಂದಿತ್ತು. ಆಹಾರ, ಪಾನೀಯ ಎಲ್ಲಾ ಖಾಲಿಯಾಗಿದೆ. ಹೀಗಾಗಿ ನಿಗದಿತ ಸಮಯಕ್ಕಿಂತ ಮೊದಲೇ ರೆಸ್ಟೋರೆಂಟ್ ಗಳನ್ನು ಕ್ಲೋಸ್ ಮಾಡಲಾಗಿದೆ.
ದಶಕಗಳಿಂದ ವ್ಯಾಪಾರದಲ್ಲಿದ್ದ ರೆಸ್ಟೋರೆಂಟ್‌ಗಳು, ಇದುವರೆಗೂ ಈ ರೀತಿ ವ್ಯಾಪಾರ ಆಗಿರುವುದನ್ನು ಎಂದಿಗೂ ನೋಡಿಲ್ಲ ಎಂದು ಹೇಳಿದ್ದಾರೆ. ಅದು ಕೂಡ ಪೂಜೆಯ ಸಮಯದಲ್ಲಿ ಈ ರೀತಿ ವ್ಯಾಪಾರ ಆಗಿರುವುದು ಅಸಾಮಾನ್ಯವಾದುದು.
“ನಾವು ಸಾಮಾನ್ಯವಾಗಿ ಪೂಜೆಯ ದಿನಗಳಲ್ಲಿ ಎರಡು ಬಾರಿ ನಿಯಮಿತ ವ್ಯಾಪಾರ ಮಾಡುತ್ತೇವೆ. ಆದರೆ, ಇಲ್ಲಿ ದಿನವಿಡೀ ವಿಪರೀತ ವ್ಯಾಪಾರವಾಗಿದೆ. 2005 ರಲ್ಲಿ ಹಬ್ಬದ ಸಮಯದಲ್ಲಿ ರೆಸ್ಟೋರೆಂಟ್‌ಗಳು ಮಾಡಿದ ವ್ಯಾಪಾರಕ್ಕಿಂತ ಶೇ.25 ರಿಂದ 30 ರಷ್ಟು ಹೆಚ್ಚು ವ್ಯಾಪಾರ ಮಾಡಿವೆ” ಎಂದು ಹೋಟೆಲ್ ಉದ್ಯಮಿಯೊಬ್ಬರು ಹೇಳಿದ್ದಾರೆ.
ಕಳೆದ 18 ತಿಂಗಳುಗಳಿಂದ ಕೋವಿಡ್ ನಿರ್ಬಂಧವಿತ್ತು. ಇದೀಗ ಸಡಿಲಗೊಂಡಿರುವುದರಿಂದ ಜನರು ಹೊರಗೆ ಬಂದು ಊಟ ಮಾಡಿದ್ದಾರೆ. ಇದೊಂಥರಾ ಸೇಡು ತೀರಿಸಿಕೊಂಡು ಆಹಾರ ಸೇವಿಸಿದಂತಾಗಿದೆ. ಯಾವುದೇ ಮಿತಿಯಿರಲಿಲ್ಲ. ಇದು ಕೋಲ್ಕತ್ತಾದಲ್ಲಿ ಮಾತ್ರವಲ್ಲದೆ ದೇಶದ ಇತರ ಭಾಗಗಳಲ್ಲಿ ಮತ್ತು ವಿದೇಶಗಳಲ್ಲಿನ ರೆಸ್ಟೋರೆಂಟ್‌ಗಳು ಕೂಡ ಇದೇ ರೀತಿಯ ವ್ಯಾಪಾರವನ್ನು ಮಾಡಿವೆ. ಲಂಡನ್‌ನಲ್ಲಿ ಜನರು ಟೇಬಲ್‌ಗಾಗಿ ಜಗಳವಾಡುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.