ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಕೇಂದ್ರ ಸರ್ಕಾರವು ಕಳೆದ 7 ವರ್ಷಗಳಿಂದ ಮಹತ್ತರ ಸಾಧನೆ ಮಾಡಿದೆ ಎಂದು ಬಿಜೆಪಿ ಹಾಗೂ ಮೈತ್ರಿಪಕ್ಷಗಳು ಒಂದೆಡೆ ಬೆನ್ನುತಟ್ಟಿಕೊಳ್ಳುತ್ತಿದ್ದರೆ. ಪ್ರತಿಪಕ್ಷಗಳು ಮಾತ್ರ ಜನಸಾಮಾನ್ಯರ ನಿತ್ಯದ ಗೋಳು, ಹಣದುಬ್ಬರ, ಪೆಟ್ರೋಲ್ ದಾಖಲೆ ಬೆಲೆಗಳ ಕುರಿತು ಪ್ರಶ್ನೆಗಳನ್ನು ಎತ್ತುತ್ತಲೇ ಇವೆ.
ಇದಕ್ಕೆ ಸರ್ಕಾರದಿಂದ ಯಾವುದೇ ಸಮಾಧಾನಕರ ಉತ್ತರಗಳು ಲಭ್ಯವಾಗುತ್ತಿಲ್ಲ. ಪ್ರತಿಪಕ್ಷಗಳು ಕೂಡ ಪಟ್ಟು ಬಿಡುತ್ತಿಲ್ಲ.
ಈ ಆರೋಪ- ಪ್ರತ್ಯಾಪರೋಪಗಳ ಸಮರವು ಇತ್ತೀಚೆಗೆ ಹಾಸ್ಯದ ಮೂಲಕ ಚಾಣಾಕ್ಷ ಹೋಲಿಕೆಯೊಂದಕ್ಕೆ ಸಾಕ್ಷಿಯಾಯಿತು. ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂಗಳಲ್ಲಿ ಕೆಲವರು ಈ ಹಾಸ್ಯವನ್ನು ಆನಂದಿಸಿ, ಪ್ರತಿಪಕ್ಷ ಸಂಸದರು ಪ್ರಧಾನಿ ಮೋದಿ ಅವರ ಕಾಲೆಳೆದಿರುವ ರೀತಿಯನ್ನು ಮೆಚ್ಚಿದ್ದಾರೆ.
SHOCKING: ಯುವತಿಗೆ ಡ್ರಗ್ಸ್ ನೀಡಿ ಪೈಶಾಚಿಕ ಕೃತ್ಯ
ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಡೆರಿಕ್ ಒಬ್ರೀನ್ ಅವರು ಪ್ರಧಾನಿ ಮೋದಿ ಅವರ ಜೇಮ್ಸ್ ಬಾಂಡ್-007 ಪೋಸ್ಟರ್ ಒಂದನ್ನು ತಯಾರಿಸಿ ಪೋಸ್ಟ್ ಮಾಡಿದ್ದಾರೆ.
ಇದರಲ್ಲಿನ ಹಾಸ್ಯಚಟಾಕಿ ಎಂದರೆ ಬಾಂಡ್ ಮುಖಕ್ಕೆ ಮೋದಿ ಅವರ ಮುಖವನ್ನು ಅಳವಡಿಸಲಾಗಿದೆ. ಇದು ಪಕ್ಕಾ ಫೋಟೋಶಾಪ್ ಮಾಡಿ ಮಾರ್ಪಡಿಸಲಾದ ಚಿತ್ರ. ಹಾಗಿದ್ದೂ, ಇಲ್ಲಿರುವ ಆಳವಾದ ಹಾಸ್ಯಮಯ ಹೋಲಿಕೆ ಎಂದರೆ ’007’ !
ಹೌದು, ಶೂನ್ಯ ಅಭಿವೃದ್ಧಿ, ಶೂನ್ಯ ಆರ್ಥಿಕ ಪ್ರಗತಿ ಜತೆಗೆ 7 ವರ್ಷಗಳನ್ನು ಮೋದಿ ಸವೆಸಿದ್ದಾರೆ ಎನ್ನುವುದನ್ನು 007 ಎಂದು ಸಂಸದರು ಕರೆದಿದ್ದಾರೆ.
2014ರಲ್ಲಿ ಪೆಟ್ರೋಲ್ ಮೇಲೆ ಹೇರಲಾಗಿದ್ದ ಸುಂಕದ ಹೊರೆಯಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 75 ಸಾವಿರ ಕೋಟಿ ವಾರ್ಷಿಕ ಆದಾಯ ಸಂಗ್ರಹವಾಗಿತ್ತು. ಆದರೆ ಸದ್ಯದ ಮಟ್ಟಿಗೆ ಕೇಂದ್ರ ಸರ್ಕಾರವು ಪೆಟ್ರೋಲ್ ಬೆಲೆ ಏರಿಕೆ ನೆಪದಲ್ಲಿ 3.50 ಲಕ್ಷ ಕೋಟಿ ರೂ. ಸುಂಕದ ಮೂಲಕ ಜನರ ಜೇಬಿನಿಂದ ಕೊಳ್ಳೆಹೊಡೆಯುತ್ತಿದೆ ಎಂದು ವಾಜಪೇಯಿ ಸಂಪುಟದಲ್ಲಿದ್ದ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರೂ ಮೋದಿ ಆಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.