alex Certify ʼಬಾಲಿವುಡ್ʼನ 20 ವರ್ಷಗಳ ಪ್ರಯಾಣ ಸಂಭ್ರಮಿಸಿದ ನಟಿ ದಿಯಾ ಮಿರ್ಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಾಲಿವುಡ್ʼನ 20 ವರ್ಷಗಳ ಪ್ರಯಾಣ ಸಂಭ್ರಮಿಸಿದ ನಟಿ ದಿಯಾ ಮಿರ್ಜಾ

ಬಾಲಿವುಡ್​ನ ಪ್ರಸಿದ್ಧ ಸಿನಿಮಾಗಳಲ್ಲಿ ಒಂದಾದ ರೆಹೆನಾ ಹೈ ತೆರೆ ದಿಲ್​ ಮೇ ತೆರೆ ಕಂಡು ಇಂದಿಗೆ 20 ವರ್ಷಗಳನ್ನು ಪೂರೈಸಿದೆ. ಆರ್​.ಮಾಧವನ್​, ದಿಯಾ ಮಿರ್ಜಾ ಹಾಗೂ ಸೈಫ್​ ಅಲಿ ಖಾನ್​ ಮುಖ್ಯ ಭೂಮಿಕೆಯ ಈ ಸಿನಿಮಾ 2001ರ ಅಕ್ಟೋಬರ್​ 19ರಂದು ತೆರೆ ಕಂಡಿತ್ತು. ಗೌತಮ್ ಮೆನನ್​ ನಿರ್ದೇಶನದ ಈ ಸಿನಿಮಾ ತಮಿಳಿನ ಮಿನ್ನಲೆಯ ರಿಮೇಕ್​ ಆಗಿದೆ. ಈ ಸಿನಿಮಾದಲ್ಲಿಯೂ ಮಾಧವನ್​ ನಟಿಸಿದ್ದಾರೆ. ಈ ಸಿನಿಮಾದ ಮೂಲಕ ನಟಿ ದಿಯಾ ಮಿರ್ಜಾ ಬಾಲಿವುಡ್​ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು.

‘ಎಲ್ಲಾ ಮಕ್ಕಳು ಮದ್ಯಪಾನ ಮಾಡುತ್ತಾರೆ, ಅದರಲ್ಲೇನು ತಪ್ಪು….?’ ಎಂದ ಕಾಂಗ್ರೆಸ್ ಶಾಸಕಿ: ವಿಡಿಯೋ ವೈರಲ್

ರೆಹೆನಾ ಹೈ ತೆರೆ ದಿಲ್​ ಮೇ ಸಿನಿಮಾದ 20ನೇ ವರ್ಷದ ವಾರ್ಷಿಕೋತ್ಸವವನ್ನು ದಿಯಾ ಮಿರ್ಜಾ 20 ವರ್ಷಗಳ ನಿಜವಾದ ಪ್ರೀತಿ ಎಂದು ಕರೆದಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಈ ಸಂಭ್ರಮವನ್ನು ಹಂಚಿಕೊಂಡಿರುವ ನಟಿ ದಿಯಾ, ನನ್ನ ಮೊದಲ ಸಿನಿಮಾ ತೆರೆಕಂಡು ಇಂದಿಗೆ 20 ವರ್ಷ ಪೂರೈಸಿದೆ. ಇದೊಂದು ಅತ್ಯದ್ಭುತ ಪಯಣವಾಗಿದೆ. ಕಲಾವಿದೆಯಾಗಿ ಇನ್ನಷ್ಟು ಕಲಿತು ಮತ್ತಷ್ಟು ಮುಂದುವರಿಯುವ ಆಸೆ ನನ್ನದು. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ. ಹಾಗೂ ರೆಹೆನಾ ಹೈ ತೆರೆ ದಿಲ್​ ಮೇ ತಂಡಕ್ಕೂ ನನ್ನ ಧನ್ಯವಾದ ಎಂದು ಬರೆದಿದ್ದಾರೆ.

ಬಾಕ್ಸ್​ ಆಫೀಸಿನಲ್ಲಿ ಈ ಸಿನಿಮಾ ತಕ್ಕಮಟ್ಟಿಗೆ ಸದ್ದು ಮಾಡಿತ್ತಾದರೂ ಟಿವಿ ಹಾಗೂ ಇತರೆ ವೇದಿಕೆಗಳಲ್ಲಿ ತೆರೆ ಕಂಡ ಬಳಿಕ ಈ ಸಿನಿಮಾ ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಜರಾ ಜರಾ, ರೆಹೆನಾ ಹೈ ತೆರೆ ದಿಲ್​ ಮೇ ಹಾಗೂ ಸಚ್​ ಕೆಹ್​ ರಾ ಹೈ ಹಾಡುಗಳು ಇಂದಿಗೂ ಕೂಡ ಪ್ರಚಲಿತದಲ್ಲಿವೆ.

https://www.instagram.com/p/CVM9ZcgjpFC/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...