alex Certify ‘ಎಲ್ಲಾ ಮಕ್ಕಳು ಮದ್ಯಪಾನ ಮಾಡುತ್ತಾರೆ, ಅದರಲ್ಲೇನು ತಪ್ಪು….?’ ಎಂದ ಕಾಂಗ್ರೆಸ್ ಶಾಸಕಿ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಎಲ್ಲಾ ಮಕ್ಕಳು ಮದ್ಯಪಾನ ಮಾಡುತ್ತಾರೆ, ಅದರಲ್ಲೇನು ತಪ್ಪು….?’ ಎಂದ ಕಾಂಗ್ರೆಸ್ ಶಾಸಕಿ: ವಿಡಿಯೋ ವೈರಲ್

ಜೋಧಪುರ್: ಎಲ್ಲಾ ಮಕ್ಕಳು ಮದ್ಯಪಾನ ಮಾಡುತ್ತಾರೆ ಎಂದು ರಾಜಸ್ಥಾನ ಕಾಂಗ್ರೆಸ್ ಶಾಸಕಿ ಮೀನಾ ಕನ್ವಾರ್ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಬಂಧಿತರಾಗಿರುವ ತಮ್ಮ ಯುವ ಸಂಬಂಧಿಕರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ, ರಾಜಸ್ಥಾನ ಕಾಂಗ್ರೆಸ್ ಶಾಸಕಿ ಮೀನಾ ಕನ್ವಾರ್ ಮತ್ತು ಆಕೆಯ ಪತಿ ಉಮೈದ್ ಸಿಂಗ್ ರಾಥೋಡ್ ಜೋಧ್ ಪುರ್ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಾಲೆಟ್ ಕಳೆದುಕೊಂಡರೂ ವಿಳಂಬವಿಲ್ಲದೆ ಆಹಾರ ತಲುಪಿಸಿದ ಜೊಮ್ಯಾಟೊ ಬಾಯ್‍ಗೆ ವ್ಯಾಪಕ ಪ್ರಶಂಸೆ

ಇಬ್ಬರೂ ಪೊಲೀಸ್ ಠಾಣೆಯೊಳಗೆ ಧರಣಿಯಲ್ಲಿ ಕುಳಿತಿರುವುದನ್ನು ಹಾಗೂ ಅವರು ಪೊಲೀಸರೊಂದಿಗೆ ಜಗಳವಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ ತನ್ನ ಸಂಬಂಧಿಕರ ನಡವಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ, ಮೀನಾ ಕನ್ವಾರ್ ‘ಎಲ್ಲಾ ಮಕ್ಕಳು ಮದ್ಯಪಾನ ಮಾಡುತ್ತಾರೆ’ ಎಂದು ಹೇಳಿದ್ದಾರೆ.

“ನಾವು ಪೊಲೀಸರಿಗೆ ವಿನಂತಿಸಿದ್ದೇವೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಮಕ್ಕಳು ಕುಡಿಯುತ್ತಾರೆ. ಇದು ಮುಖ್ಯವಾಗಬಾರದು. ನೀವು ನಮ್ಮ ಮಕ್ಕಳನ್ನು ಬಂಧಿಸಿದ್ದೀರಿ. ಅವರು ಕುಡಿದಿದ್ದರೆ ಅದರಲ್ಲೇನು ತಪ್ಪಿದೆ” ಎಂದು ಅವರು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಅಲ್ಲದೆ “ತನ್ನ ಸಂಬಂಧಿಕರನ್ನು ಬಿಡುಗಡೆ ಮಾಡದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಪೊಲೀಸರಿಗೆ ಬೆದರಿಕೆಯೊಡ್ಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...