ನವದೆಹಲಿ: ಆನ್ಲೈನ್ ಆಹಾರ ವಿತರಣಾ ಸಂಸ್ಥೆ ಜೊಮಾಟೊ ಜೊತೆ ಕಾರ್ಯನಿರ್ವಹಿಸುತ್ತಿರುವ ಡೆಲಿವರಿ ಎಕ್ಸಿಕ್ಯುಟಿವ್ ಒಬ್ಬಾತನಿಗೆ ಆನ್ಲೈನ್ನಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಟ್ವಿಟ್ಟರ್ ಬಳಕೆದಾರರು ರೆಸ್ಟೋರೆಂಟ್ನಿಂದ ಆರ್ಡರ್ ತೆಗೆದುಕೊಂಡ ಕೆಲವೇ ಕ್ಷಣಗಳಲ್ಲಿ ತನ್ನ ವಾಲೆಟ್ ಕಳೆದುಕೊಂಡರೂ, ಡೆಲಿವರಿ ಎಕ್ಸಿಕ್ಯುಟಿವ್ ವಿಳಂಬವಿಲ್ಲದೆ ಆಹಾರವನ್ನು ತಲುಪಿಸಿದ್ದಕ್ಕಾಗಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕ್ಷಮೆ ಯಾಚನೆ ಬಳಿಕ ಸಿಬ್ಬಂದಿಯನ್ನು ಮರು ನೇಮಕ ಮಾಡಿದ ಜೊಮ್ಯಾಟೋ
ಸರಣಿ ಟ್ವೀಟ್ಗಳಲ್ಲಿ ಬಳಕೆದಾರರು, ಡೆಲಿವರಿ ಎಕ್ಸಿಕ್ಯೂಟಿವ್ ಮನೀಶ್ ಭಾಗೇಲುರಾಮ್ ಗುಪ್ತಾ ಅವರ ಕೆಲಸದ ನೀತಿಯ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜೊಮ್ಯಾಟೊ ಸಂಸ್ಥಾಪಕ ದೀಪೀಂದರ್ ಗೋಯಲ್ ಅವರನ್ನು ಟ್ಯಾಗ್ ಮಾಡಿ, ಮನೀಶ್ ಭಾಗೇಲುರಾಮ್ ಗುಪ್ತಾ ಅವರ ಕಾರ್ಯ ವೈಖರಿ ನಿಜಕ್ಕೂ ಪ್ರಶಂಸನೀಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಬಳಕೆದಾರರು ಸರಣಿ ಟ್ವೀಟ್ ಜೊತೆಗೆ ಡೆಲಿವರಿ ಎಕ್ಸಿಕ್ಯೂಟಿವ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಆರ್ಡರ್ ಮಾಡಿದ 10 ನಿಮಿಷದಲ್ಲಿ ನಿಮ್ಮ ಕೈಲಿರುತ್ತಂತೆ ಸ್ಮಾರ್ಟ್ ಫೋನ್…!
“ನನ್ನ ಸಂಗಾತಿಯು ನಮ್ಮ ಮನೆಯಿಂದ 5 ಕಿಮೀ ದೂರದ ಸ್ಥಳದಿಂದ ಆಹಾರ ಆರ್ಡರ್ ಮಾಡಿದ್ದರು. ಆಹಾರವು ತಡವಾಗಿ ತಲುಪತ್ತದೆ ಎಂದು ಅಂದುಕೊಂಡಿದ್ದೆವು. ಅಲ್ಲದೆ ಆತನ ಕೈಚೀಲವನ್ನು ಕದ್ದಿರುವ ಸಾಧ್ಯತೆಯನ್ನು ಆತ ಅಳುತ್ತಲೇ ತಿಳಿಸಿದ್ದಾನೆ. ಆದರೂ ಕೂಡ 5 ನಿಮಿಷದಲ್ಲಿ ನಮಗೆ ಬಂದು ಆಹಾರ ಪೊಟ್ಟಣ ನೀಡಿದ್ದಾನೆ” ಎಂದು ಬಳಕೆದಾರರು ವಿವರಿಸಿದ್ದಾರೆ.
ಟ್ವಿಟರ್ ಬಳಕೆದಾರರ ಟ್ವೀಟ್ ವೈರಲ್ ಆದ ತಕ್ಷಣ, ಜೊಮ್ಯಾಟೋ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದೆ.