ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್ 25 ರಿಂದ ಒಂದರಿಂದ ಐದನೇ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಶಾಲೆಗಳಲ್ಲಿ ಭೌತಿಕ ತರಗತಿ ಆರಂಭಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ಸದ್ಯಕ್ಕೆ ಎಲ್ಕೆಜಿ-ಯುಕೆಜಿ ಆರಂಭವಿಲ್ಲ. ಒಂದರಿಂದ ಐದನೇ ತರಗತಿಗಳನ್ನು ಮಾತ್ರ ಆರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಪ್ರತಿ ಕೊಠಡಿಯಲ್ಲಿ ಅರ್ಧದಷ್ಟು ಮಕ್ಕಳು ಮಾತ್ರ ಕೂರಲು ಅವಕಾಶವಿದೆ. ಪ್ರತಿದಿನ ಮಕ್ಕಳ ದೇಹದ ಉಷ್ಣಾಂಶ ತಪಾಸಣೆ ನಡೆಸಲು ಸೂಚಿಸಲಾಗಿದೆ. ಶಾಲೆಗಳಲ್ಲಿ ಮಕ್ಕಳು ಗುಂಪುಗೂಡದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ.
ಒಂದು ವರ್ಷ ಎಂಟು ತಿಂಗಳ ನಂತರ ರಾಜ್ಯದಲ್ಲಿ ಒಂದರಿಂದ ಐದನೇ ತರಗತಿಗಳನ್ನು ಆರಂಭಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಕೆಜಿ-ಯುಕೆಜಿ ಹೊರತುಪಡಿಸಿ ಉಳಿದ ಮಕ್ಕಳಿಗೆ ಶಾಲೆ ಆರಂಭವಾಗಲಿದೆ.