ಕಡಲೂರು: 12 ನೇ ತರಗತಿಯ ವಿದ್ಯಾರ್ಥಿಯನ್ನು ಶಿಕ್ಷಕರೊಬ್ಬರು ನಿರ್ದಯವಾಗಿ ಕಾಲಿನಿಂದ ಒದೆಯುವ ಮತ್ತು ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ಟೋಬರ್ 13 ರಂದು ತಮಿಳುನಾಡಿನ ಕಡಲೂರು ಜಿಲ್ಲೆಯ ಸರ್ಕಾರಿ ನಂದನಾರ್ ಬಾಯ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ, ಹಿಂದಿನ ತರಗತಿಯನ್ನು ತಪ್ಪಿಸಿದ್ದಕ್ಕಾಗಿ ಶಿಕ್ಷಕ ಬಾಲಕನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ ಘಟನೆ ಸಂಭವಿಸಿದೆ.
ಶಿಖರ್ ಧವನ್ ಸ್ಟೈಲ್ ನಕಲು ಮಾಡಿದ ಕೊಹ್ಲಿ: ವಿಡಿಯೋ ವೈರಲ್
ವೈರಲ್ ಆದ ವಿಡಿಯೋದಲ್ಲಿ ತಮಿಳುನಾಡಿನ ಕಡಲೂರು ಜಿಲ್ಲೆಯ ಚಿದಂಬರಂನಲ್ಲಿರುವ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕ ಸುಬ್ರಮಣಿಯನ್, ವಿದ್ಯಾರ್ಥಿಯ ಕೂದಲನ್ನು ಹಿಡಿದು ನಿರಂತರವಾಗಿ ಹೊಡೆದು ಆತನಿಗೆ ಒದೆಯುತ್ತಿರುವುದನ್ನು ಕಾಣಬಹುದು. ತಪ್ಪನ್ನು ಪುನರಾವರ್ತಿಸುವುದಿಲ್ಲ ಎಂದು ವಿದ್ಯಾರ್ಥಿಯು ಮನವಿ ಮಾಡಿದರೂ, ಶಿಕ್ಷಕರು ವಿದ್ಯಾರ್ಥಿಗೆ ಒದೆದಿದ್ದಾರೆ.
ಶಿಕ್ಷಕರು ಥಳಿಸುತ್ತಿರುವ ದೃಶ್ಯವನ್ನು ಇಬ್ಬರು ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಹಾಗೂ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ, ಕಡಲೂರು ಡಿಸಿ ಘಟನೆಯ ತನಿಖೆಗೆ ಆದೇಶಿಸಿದ್ದಾರೆ.