ಹುಬ್ಬಳ್ಳಿ: ಉಪಚುನಾವಣೆ ಭರ್ಜರಿ ಪ್ರಚಾರದ ನಡುವೆಯೇ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಜಿಮ್ ನಲ್ಲಿ ವರ್ಕೌಟ್ ಮಾಡಿ ದೇಹ ದಂಡಿಸಿದ್ದಾರೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್ ವೊಂದರ ಜಿಮ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಮುಂಜಾನೆ ಜಿಮ್ ಮಾಡುವ ಮೂಲಕ ಗಮನ ಸೆಳೆದರು. ಸಿದ್ದರಾಮಯ್ಯನವರಿಗೆ ಸ್ಥಳೀಯ ನಾಯಕರು ಸಾಥ್ ನೀಡಿದ್ದಾರೆ.
ಬ್ರೇಕ್ ಅಪ್ ಆಗಿದೆಯಾ….? ನೋವಿನಿಂದ ಹೊರಬರಲು ಹೀಗೆ ಮಾಡಿ
ಹಾನಗಲ್ ಉಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ, ಹುಬ್ಬಳ್ಳಿ ಏರ್ ಪೋರ್ಟ್ ಬಳಿಕ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಮುಂಜಾನೆಯೇ ಹೋಟೆಲ್ ಆವರಣದಲ್ಲಿ ವಾಕಿಂಗ್ ಮಾಡಿದ ಸಿದ್ದರಾಮಯ್ಯ ಬಳಿಕ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದಾರೆ. ಇಂದು ಸಿದ್ದರಾಮಯ್ಯ ಸಿಂದಗಿ ಉಪಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
https://www.youtube.com/watch?v=ZeJE-mKC8Sg
https://www.youtube.com/watch?v=cPkqv8QYg1Y&feature=youtu.be