ಸ್ವಾಭಿಮಾನದ ವಿಚಾರದಲ್ಲಿ ಎಂಥವರಿಗೂ ಪಾಠವಾಗಬಲ್ಲ ಪುಣೆಯ ಈ ಹಿರಿಯರು ತಮ್ಮ ವೃದ್ಧಾಪ್ಯದಲ್ಲೂ ಸ್ವಾವಲಂಬನೆ ಕಂಡುಕೊಂಡಿರುವ ಸಂಗತಿ ನೆಟ್ಟಿಗರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಆವಿಷ್ಕಾರೀ ಬ್ರಾಂಡ್ ರೆಅಪ್ ಸ್ಟುಡಿಯೋ ಮಾಲಕಿ, ಉದ್ಯಮಿ ಶಿಖಾ ರತಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ಪೋಸ್ಟ್ನಲ್ಲಿ, ತಾವು ಹೊರಗೆ ಹೋಗಿದ್ದಾಗ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.
ರತನ್ ಹೆಸರಿನ ವೃದ್ಧ ಮಹಿಳೆ ಪುಣೆಯ ಎಂಜಿ ರಸ್ತೆಯಲ್ಲಿ ರತಿಗೆ ಸಿಕ್ಕಿದ್ದಾರೆ. ಬಣ್ಣ ಬಣ್ಣ ಪೆನ್ಗಳನ್ನು ಕಾರ್ಡ್ಬೋರ್ಡ್ ಡಬ್ಬದಲ್ಲಿಟ್ಟು ಮಾರಾಟ ಮಾಡುತ್ತಿದ್ದ ರತನ್, ಆ ಡಬ್ಬದ ಮೇಲೆ ವಿಶೇಷ ಸಂದೇಶವೊಂದನ್ನು ಬರೆದಿದ್ದಾರೆ.
“ನನಗೆ ಭಿಕ್ಷೆ ಬೇಡಲು ಇಷ್ಟವಿಲ್ಲ. ದಯವಿಟ್ಟು 10ರೂ.ನ ನೀಲಿ ಬಣ್ಣದ ಪೆನ್ಗಳನ್ನು ಖರೀದಿಸಿ. ಧನ್ಯವಾದ. ದೇವರು ನಿಮಗೆ ಆಶೀರ್ವದಿಸಲಿ,” ಎಂದು ಆ ರಟ್ಟಿನ ಡಬ್ಬದ ಮೇಲೆ ಬರೆಯಲಾಗಿದೆ.
ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ಯುವತಿಯ ಮಸ್ತ್ ಸ್ಟೆಪ್ಸ್: ವಿಡಿಯೋ ವೈರಲ್
ರತನ್ರ ಈ ಸ್ವಾವಲಂಬನೆಯನ್ನು ಮೆಚ್ಚಿಕೊಂಡ ರತಿ, ತಮ್ಮ ಅನುಯಾಯಿಗಳು ಹಾಗೂ ಸ್ನೇಹಿತರೊಂದಿಗೆ ರತನ್ರ ವಿಷಯವನ್ನು ಹಂಚಿಕೊಂಡಿದ್ದಾರೆ.
“ರಿಯಲ್ ಲೈಫ್ ಹೀರೋ ಮತ್ತು ಚಾಂಪಿಯನ್ ರತನ್ರನ್ನು ನಾನು ಇಂದು ಭೇಟಿ ಮಾಡಿದ್ದೇನೆ. ಸ್ನೇಹಿತರೊಂದಿಗೆ ಹೊರ ಹೋಗಿದ್ದ ವೇಳೆ ರತನ್ರನ್ನು ಭೇಟಿ ಮಾಡಿದೆ. ರತನ್ರ ನೋಟ್ ಕಂಡ ನನ್ನ ಸ್ನೇಹಿತೆ ಕೂಡಲೇ ಪೆನ್ ಖರೀದಿ ಮಾಡಿದಳು. ಇದರಿಂದ ಬಹಳ ಖುಷಿಯಾದ ರತನ್ರ ಮೊಗದಲ್ಲಿ ಸಂತಸವನ್ನು ನಾವು ನೋಡಬಹುದಾಗಿತ್ತು,” ಎಂದು ರತಿ ತಿಳಿಸಿದ್ದಾರೆ.
ಮಗನಿಗೆ ಚಾರ್ಲ್ಸ್ ಡಾರ್ವಿನ್ ಉಡುಗೊರೆಯಾಗಿ ನೀಡಿದ್ದ ಸೂಕ್ಷ್ಮದರ್ಶಕ ಹರಾಜಿಗೆ
ಒಂದೇ ಒಂದು ಪೆನ್ ಖರೀದಿ ಮಾಡಿದರೂ ಸಹ ರತನ್ ಇನ್ನಷ್ಟು ಪೆನ್ ಖರೀದಿ ಮಾಡಿ ಎಂದು ಕೇಳದೇ ಇದ್ದ ವಿಷಯ ರತಿಗೆ ಇಷ್ಟವಾಗಿದೆ. ಇದರಿಂದ ಇನ್ನಷ್ಟು ಖುಷಿಯಾದ ರತಿ ಮತ್ತಷ್ಟು ಪೆನ್ಗಳನ್ನು ಖರೀದಿ ಮಾಡಿದ್ದಾರೆ.
“ಆಕೆಯ ಧನ್ಯಭಾವ ಮತ್ತು ನಗೆ ನನ್ನ ಹೃದಯ ತುಂಬಿದ್ದು, ಇದನ್ನು ಸಂಭ್ರಮಿಸಿ ಹಂಚಿಕೊಳ್ಳಬೇಕು, ಅದಕ್ಕೇ ಈ ಪೋಸ್ಟ್,” ಎಂದು ರತಿ ಕ್ಯಾಪ್ಷನ್ನಲ್ಲಿ ತಿಳಿಸಿದ್ದಾರೆ.
ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ನೆಟ್ಟಿಗರು, ಮೊದಲು ಎಂಜಿ ರೋಡ್ಗೆ ಹೋಗಿ ಈ ಜೀವವನ್ನು ಕಾಣಲು ಇಷ್ಟಪಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
https://www.instagram.com/p/CUpoPXPISmm/?utm_source=ig_web_copy_link