ಇತ್ತೀಚೆಗೆ ಭಾರತೀಯ ಮದುವೆ ಸಮಾರಂಭದಲ್ಲಿ ನೃತ್ಯ ಇಲ್ಲದೆ ವಿವಾಹ ಪೂರ್ಣವಾದಂತೆ ಅನಿಸುವುದಿಲ್ಲ ಎಂಬಂತಾಗಿದೆ. ವಧು ಅಥವಾ ವರ ನೃತ್ಯ ಮಾಡುವುದು ಸಂಪ್ರದಾಯ ಎಂಬಂತಾಗಿಬಿಟ್ಟಿದೆ. ಅಂದಹಾಗೆ ಇಲ್ಲೊಂದೆಡೆ ವಧುವೊಬ್ಬಳ ಡ್ಯಾನ್ಸ್ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ದೇಸಿ ವಧು ತನ್ನ ಮದುವೆಯ ದಿನದಂದು ತಂಡದೊಂದಿಗೆ ಸೊಂಟ ಬಳುಕಿಸಿದ್ದಾಳೆ. ʼಜಾನೆ ತು ಯಾ ಜಾನೆ ನಾʼ ಚಿತ್ರದ ಪಪ್ಪು ಕಾಂಟ್ ಡ್ಯಾನ್ಸ್ ಹಾಡಿಗೆ ವಧು ಹಾಗೂ ಗ್ಯಾಂಗ್ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಮದುವೆ ಸಮಾರಂಭದಿಂದ ಆಸೀಸ್ ಕೌರ್ ನ ಚಾಪ್ ತಿಲಕ್ ಗೆ ಸುಂದರ ವಧು ನೃತ್ಯ ಮಾಡುವ ಮತ್ತೊಂದು ವಿಡಿಯೋ ಕೂಡ ವೈರಲ್ ಆಗಿದೆ.
ವಧುವನ್ನು ಕೋಮಲ್ ಕಪೂರ್ ಎಂದು ಗುರುತಿಸಲಾಗಿದೆ. ಈ ನೃತ್ಯ ಪ್ರದರ್ಶನವನ್ನು ಮಹಿಮಾ ಸಂಯೋಜಿಸಿದ್ದಾರೆ. ಈ ಕ್ಯೂಟ್ ವಿಡಿಯೋವನ್ನು ಮಹಿಮಾ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.