ಮದುವೆ ಅಂದ್ರೆ ಸಂಭ್ರಮ ಮನೆಮಾಡಿರುತ್ತೆ. ಇಲ್ಲಿ ವಧು-ವರರು ನೃತ್ಯ ಮಾಡಬಹುದು, ಮೋಜು ಕೂಡ ಮಾಡಬಹುದು. ಹಾಗೆಯೇ ಇಲ್ಲೊಬ್ಬಳು ವಧು ಸ್ಟೇಜ್ ನಲ್ಲಿ ನೃತ್ಯ ಮಾಡುತ್ತಿದ್ದರೆ, ಅತ್ತ ವರ ಕಣ್ಣೀರಿಟ್ಟಿರುವ ವಿಡಿಯೋ ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಮನಮುಟ್ಟುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು ‘ಮದುವೆಯಾದವರು’ ಎಂಬ ಶೀರ್ಷಿಕೆ ನೀಡಲಾಗಿದೆ. ನೀಲಿಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸುತ್ತಿದ್ದ ವಧು, ʼತೇರಿ ಹೋ ಗಯಿʼ ಹಾಡಿಗೆ ನೃತ್ಯ ಮಾಡಿದ್ದಾರೆ. ವಧು ವೇದಿಕೆಯಲ್ಲಿ ಸ್ಟೆಪ್ಸ್ ಹಾಕುತ್ತಿರಬೇಕಾದ್ರೆ, ವೇದಿಕೆಯ ಮುಂಭಾಗ ಕುಳಿತಿದ್ದ ವರ ಅತ್ತುಬಿಟ್ಟಿದ್ದಾನೆ.
ವಧು ನೃತ್ಯ ಮಾಡುತ್ತಾ, ವರನ ಕೈಯನ್ನು ಹಿಡಿದು ವೇದಿಕೆಗೆ ಕರೆದೊಯ್ದಿದ್ದಾಳೆ. ಬಳಿಕ ಪ್ರೀತಿಯಿಂದ ಆತನ ಕಣ್ಣೀರನ್ನು ಒರೆಸಿದ್ದಾಳೆ. ವರನ ಭಾವನೆಗಳು ಅವನು ತನ್ನ ಹೆಂಡತಿಯನ್ನು ಎಷ್ಟು ಪ್ರೀತಿಸುತ್ತಾನೆಂದು ತೋರಿಸುತ್ತದೆ.
ಸದ್ಯ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ಸ್ಟಾಗ್ರಾಮ್‌ನಲ್ಲಿ 12,000 ಕ್ಕಿಂತಲೂ ಹೆಚ್ಚು ಲೈಕ್‌ಗಳನ್ನು ಸ್ವೀಕರಿಸಲಾಗಿದ್ದು, ಹಲವಾರು ಕಮೆಂಟ್‌ಗಳನ್ನು ಪಡೆದಿದೆ. ಅನೇಕ ಬಳಕೆದಾರರು ವಿಡಿಯೋ ನೋಡುವಾಗ ತಾವೂ ಭಾವುಕರಾಗಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
https://youtu.be/WfDEtofWMBA