ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರನ್ನು ಲೂಟಿ ರವಿ ಎಂದು ಕರೆದಿರುವ ಕಾಂಗ್ರೆಸ್, ಕೋಟಿ ರವಿಯಾಗಿದ್ದು ಹೇಗೆ ಎಂದು ಪ್ರಶ್ನಿಸಿದೆ.
2004-2010 ರ ಮಧ್ಯೆ 49 ಲಕ್ಷದಿಂದ 3.18 ಕೋಟಿಗೇರಿದ ಸಿ.ಟಿ. ರವಿ ಆಸ್ತಿ ಬಗ್ಗೆ ದೂರು ದಾಖಲಾಗಿತ್ತು. 2018ರಲ್ಲಿ ನೀವೇ ಘೋಷಿಸಿದ ಅಧಿಕೃತ ಆಸ್ತಿ 5 ಕೋಟಿಗೂ ಅಧಿಕ, ನಿಮ್ಮ ಕುಟುಂಬದ್ದು ಇನ್ನೂ ಅಧಿಕ, ಬೇನಾಮಿ ಅತ್ಯಧಿಕ. ಹಿಂದುತ್ವ ಜಪದಿಂದ ಈ ಪ್ರಮಾಣದ ಆಸ್ತಿ ಸಂಪಾದಿಸಬಹುದೇ ಲೂಟಿ ರವಿಯವರೇ ಎಂದು ಪ್ರಶ್ನಿಸಿದೆ.
ಸಂಬಂಧಿಯನ್ನು ಮುಂದಿಟ್ಟುಕೊಂಡು ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆಗಳನ್ನು ಪಡೆದಿರುವ ನೀವು ಎಷ್ಟೆಷ್ಟು ಕಮಿಷನ್ ಕೊಟ್ಟಿದ್ದೀರ ? ಸಾರಿಗೆ ಬಸ್ಸಿನಲ್ಲಿ ಓಡಾಡುತ್ತಿದ್ದ ಅಂದಿನ ಬಜರಂಗದಳ ಕಾರ್ಯಕರ್ತ, ಇಂದಿನ ಫುಲ್ ಟೈಂ ರಾಜಕಾರಣಿ ಕೋಟಿ ರವಿಯಾಗಿದ್ದು ಹೇಗೆ ? ಎಲ್ಲಿ, ಯಾರಿಂದ, ಎಷ್ಟು ಕಲೆಕ್ಷನ್ ಮಾಡಿದಿರಿ ? ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದೆ.