ಈ ವರ್ಷದ ದೀಪಾವಳಿಯು ಕೊರೊನಾ ಸಂಕಷ್ಟದ ನಡುವೆಯೂ ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಮಾತ್ರ ಲಕ್ಷ್ಮೀ ಕಟಾಕ್ಷವನ್ನು ಮೂರು ರೂಪಗಳಲ್ಲಿ ತಂದು ಕೊಡಲಿದೆ. ಇದು ಕೇಂದ್ರ ಸರ್ಕಾರ ನೀಡುವ 7ನೇ ವೇತನ ಆಯೋಗದ ಅಡಿಯಲ್ಲಿನ ದೀಪಾವಳಿ ಬಂಪರ್ ಗಿಫ್ಟ್ ಕೂಡ ಹೌದು.
ಈ ರಾಶಿಯವರಿಗಿದೆ ಇಂದು ವಾಣಿಜ್ಯ ವ್ಯವಹಾರದಲ್ಲಿ ಲಾಭ
ಮೊದಲನೆಯದಾಗಿ, ತುಟ್ಟಿ ಭತ್ಯೆ ಹೆಚ್ಚಳ (ಡಿಎ), ಎರಡನೇಯದಾಗಿ ತುಟ್ಟಿ ಭತ್ಯೆ ಬಾಕಿ ಸಂದಾಯ (ಡಿಎ ಅರಿಯರ್ಸ್) ಹಾಗೂ ಮೂರನೇಯದಾಗಿ ಪ್ರಾವಿಡೆಂಟ್ ಫಂಡ್ (ಪಿಎಫ್) ಬಡ್ಡಿಯು ಖಾತೆಗೆ ಜಮೆಯಾಗಲಿದೆ.
ಈ ಮೂರು ಆರ್ಥಿಕ ಲಾಭಗಳನ್ನು ಕುಳಿತಲ್ಲಿಯೇ ಎಣಿಸಿಕೊಳ್ಳುವ ಸೌಭಾಗ್ಯ ಕೇಂದ್ರ ಸರ್ಕಾರಿ ನೌಕರರದ್ದು. 2021ರ ಜನವರಿಯಿಂದ ಮೇವರೆಗೆ ಶೇ.3ರಷ್ಟು ತುಟ್ಟಿ ಭತ್ಯೆ ಹೆಚ್ಚಳವನ್ನು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿಯಾಗಿದೆ. ಅದೇ ರೀತಿ ಜುಲೈ ಮತ್ತು ಆಗಸ್ಟ್ ವೇತನದ ಜತೆಗೆ ತುಟ್ಟಿ ಭತ್ಯೆ ಏರಿಕೆಯನ್ನು ಸರ್ಕಾರ ಇನ್ನೂ ಕೂಡ ನೌಕರರಿಗೆ ಜಮೆ ಮಾಡಬೇಕಿದೆ.
BIG NEWS: ಹಣಕಾಸು ಬಿಕ್ಕಟ್ಟು, ಕುಸಿತಕ್ಕೆ ಕಾರಣವಾಗಬಹುದು ಬಿಟ್ ಕಾಯಿನ್, ಕ್ರಿಪ್ಟೋಕರೆನ್ಸಿ
ಇದಲ್ಲದೆಯೇ 6 ಕೋಟಿ ಪಿಂಚಣಿದಾರರು ತಮ್ಮ ಇಪಿಎಫ್‌ಒ ಖಾತೆಗೆ ನೇರವಾಗಿ ಬಡ್ಡಿಯನ್ನು ದೀಪಾವಳಿಯಂದೇ ಪಡೆಯಲಿದ್ದಾರೆ. ಬ್ಯಾಂಕ್ ಖಾತೆ ಜೋಡಣೆ ಆದವರಿಗೆ ಬಡ್ಡಿ ಮೊತ್ತವು ಅಲ್ಲಿಗೇ ಸಂದಾಯವಾಗಲಿದೆ.