ಜನನಾಂಗದಲ್ಲಿ ಎರಡು ದ್ವಾರಗಳನ್ನು ಹೊಂದುವುದು ಸಹಜವಲ್ಲ ಎಂಬ ವಿಚಾರ ಆಸ್ಟ್ರೇಲಿಯಾದ ಮಹಿಳೆಯೊಬ್ಬರಿಗೆ ಬಹಳ ತಡವಾಗಿ ಅರಿವಿಗೆ ಬಂದಿದೆ. ಋತುಚಕ್ರದ ಅವಧಿಯಲ್ಲಿ ಎರಡು ಟ್ಯಾಂಪನ್ಗಳನ್ನು ಬಳಸುವುದು ಅಸಹಜ ಎಂಬುದು ಈಕೆಗೆ ಗೊತ್ತೇ ಇರಲಿಲ್ಲ!
“ಮುಜುಗರ ತರಬಲ್ಲ ವಿಷಯಗಳ ಬಗ್ಗೆ ನಾನು ನನ್ನ ತಾಯಿಯೊಂದಿಗೆ ಆಗ ಚರ್ಚೆ ಮಾಡುತ್ತಿರಲಿಲ್ಲ. ಒಂದು ದಿನ, ನನ್ನ ಆಪ್ತ ಸ್ನೇಹಿತೆ ಹಾಗೂ ತಾಯಿಯೊಂದಿಗೆ ಸಂವಾದದಲ್ಲಿ ಭಾಗಿಯಾಗಿದ್ದೆ, ಆಗ ನಾನು ಎರಡು ದ್ವಾರಗಳಿಗೆ ಟ್ಯಾಂಪನ್ ಬಳಸುವ ವಿಚಾರವನ್ನು ಅವರ ಮುಂದೆ ಪ್ರಸ್ತಾಪ ಮಾಡಿದೆ,” ಎಂದು ಟೀ ಬಾರ್ಲೆಟ್ ತಿಳಿಸಿದ್ದಾರೆ.
BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ; ಸಾವಿನ ಸಂಖ್ಯೆಯಲ್ಲಿ ಏರಿಕೆ; 24 ಗಂಟೆಯಲ್ಲಿ 379 ಜನ ಮಹಾಮಾರಿಗೆ ಬಲಿ
“ಆಗ ಅಚ್ಚರಿಗೊಂಡು ನನ್ನತ್ತ ನೋಡಿದ ನನ್ನ ತಾಯಿ ’ಏನು!’ ಎಂದಿದ್ದಾರೆ. ಮೊದಲಿಗೆ ಹೀಗೆ ಎರಡು ದ್ವಾರಗಳು ಇರಲು ಸಾಧ್ಯವೇ ಇಲ್ಲ ಎಂದು ವಾದ ನಡೆಯಿತು. ಬಳಿಕ ವಿಷಯ ಅರಿವಿಗೆ ಬಂದ ಮೇಲೆ ವೈದ್ಯರ ಬಳಿಗೆ ಹೋಗಲು ಆಕೆ ಸೂಚಿಸಿದರು. ಆಗಲೇ ನನಗೆ ಅರಿವಾಗಿದ್ದು, ನನ್ನ ತಾಯಿ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಹಾಗೂ ಆ ಜಾಗದಲ್ಲಿ ಎರಡೆರಡು ದ್ವಾರಗಳು ಇರುವುದಿಲ್ಲವೆಂದು,” ಎಂದು ಟೀ ತಿಳಿಸಿದ್ದಾರೆ.
ಮಹಿಳೆಯ ಸಂತಾನ ವ್ಯವಸ್ಥೆ ಸರಿಯಾಗಿ ಬೆಳವಣಿಗೆ ಕಾಣದೇ ಇದ್ದು, ಸೆಪ್ಟಮ್ ಇರುವಿಕೆಯ ಕಾರಣದಿಂದಾಗಿ ಜನನಾಂಗವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದದೇ ಇದ್ದಾಗ ಜನನಾಂಗದಲ್ಲಿ ಹೀಗೆ ವಿಭಜಕ ಗೋಡೆ ಸೃಷ್ಟಿಯಾಗುತ್ತದೆ ಎಂದು ಗೈನೆಕಾಲಜಿಸ್ಟ್ರನ್ನು ಸಂಪರ್ಕಿಸಿದ ಬಳಿಕ ಟೀಗೆ ಗೊತ್ತಾಗಿದೆ.
ತನ್ನ 17ನೇ ವಯಸ್ಸಿನಲ್ಲಿ ಜನನಾಂಗದ ಶಸ್ತ್ರಚಿಕಿತ್ಸೆಗೆ ಒಳಗಾದ ಟೀ, ಸೆಪ್ಟಂಅನ್ನು ತೆಗೆಸಿದ್ದಾರೆ.
ತನಗಾದ ಪರಿಸ್ಥಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ಟೀ, ತನ್ನಂತೆ ಬೇರೆ ಹೆಣ್ಣುಮಕ್ಕಳು ತಡವಾಗಿ ಸತ್ಯವನ್ನು ಅರಿಯುವುದು ಬೇಡವೆಂದು ಆಶಿಸಿದ್ದಾರೆ.