ರೈಲ್ವೇ ಪ್ರಯಾಣಿಕರಿಗೆ ನಿರಾಳತೆ ನೀಡುವ ಬೆಳವಣಿಗೆಯೊಂದರಲ್ಲಿ, ರೈಲುಗಳಲ್ಲೇ ಆಹಾರ ಒದಗಿಸುವ ತನ್ನ ಸೇವೆಗಳನ್ನು ಮುಂದುವರೆಸುವ ನಿರ್ಣಯವನ್ನು ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ತೆಗೆದುಕೊಳ್ಳಲಿದೆ.
ಈ ಸಂಬಂಧ ರೈಲ್ವೇಯ ಶಾಸನಾತ್ಮಕ ಸವಲತ್ತು ಸಮಿತಿ (ಪಿಎಸಿ) ಅಕ್ಟೋಬರ್ 2021ರ ಕಡೆಯ ವಾರದಲ್ಲಿ ಸಭೆ ಸೇರಲಿದೆ. 18 ತಿಂಗಳ ಬಳಿಕ ರೈಲುಗಳಲ್ಲಿ ಆಹಾರ ಒದಗಿಸುವ ನಿರ್ಣಯವನ್ನು ಸಭೆಯ ವೇಳೆ ತೆಗೆದುಕೊಳ್ಳಲಾಗುವುದು.
ʼನೋಕಿಯಾʼ ಪ್ರಿಯರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್
ಪ್ರಯಾಣಿಕರು, ಸಮಿತಿಗಳು ಹಾಗೂ ಏಜೆನ್ಸಿಗಳಿಂದ ಕೆಟರಿಂಗ್ ಸೇವೆಗಳನ್ನು ಮುಂದುವರೆಸಲು ಭಾರತೀಯ ರೈಲ್ವೇಗೆ ಬಹಳಷ್ಟು ಸೂಚನೆಗಳು ಬರುತ್ತಿವೆ. ಈ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಪಿಎಸಿ ಅಕ್ಟೋಬರ್ 22 ಅಥವಾ 23 ರಂದು ಸಭೆ ಸೇರುವ ನಿರೀಕ್ಷೆಯಿದೆ.
ದಂಗಾಗಿಸುವಂತಿದೆ ಶಾರೂಖ್ ಖಾನ್ ʼವ್ಯಾನಿಟಿ ವ್ಯಾನ್ʼ ನಲ್ಲಿರುವ ಐಷಾರಾಮಿ ವ್ಯವಸ್ಥೆ
ರೈಲುಗಳಲ್ಲಿ ಆಹಾರ ಒದಗಿಸುವ ಸೇವೆಯನ್ನು ನೀಡುತ್ತಾ ಬಂದಿರುವ ಐಆರ್ಸಿಟಿಸಿ, 19 ರಾಜಧಾನಿ ಎಕ್ಸ್ಪ್ರೆಸ್ ರೈಲುಗಳು, 2 ತೇಜಸ್, 1 ಗತಿಮಾನ್, 1 ವಂದೇ ಭಾರತ್, 22 ಶತಾಬ್ದಿ, 19 ದುರೊಂತೋ ಮತ್ತು 296 ಮೇಲ್/ಎಕ್ಸ್ಪ್ರೆಸ್ ರೈಲುಗಳಲ್ಲಿ ಅಡುಗೆ ಮನೆಯ ಸವಲತ್ತನ್ನು ಒದಗಿಸುತ್ತಾ ಬಂದಿದೆ.