ಸಾಮಾನ್ಯವಾಗಿ ನೀವು ಸ್ನೇಹಿತರ ಜೊತೆಗೋ ಅಥವಾ ಕುಟುಂಬದ ಜೊತೆಗೋ ರೆಸ್ಟೋರೆಂಟ್ ಗೆ ಭೇಟಿ ನೀಡಿದ್ರೆ ಎಷ್ಟು ಹಣ ಖರ್ಚಾಗಬಹುದು..? ಅಬ್ಬಬ್ಬಾ ಅಂದ್ರೆ 10,000 ರೂ. ? ಆದರೆ ಇಲ್ಲೊಂದೆಡೆ ರೆಸ್ಟೋರೆಂಟ್ ಗೆ ಊಟ ಮಾಡಲು ಹೋದ ನಾಲ್ವರಿಗೆ ಖರ್ಚಾಗಿದ್ದು ಎಷ್ಟು ಗೊತ್ತಾ..? ಮುಂದೆ ಓದಿ.
ಲಂಡನ್ ಪ್ರಖ್ಯಾತ ರೆಸ್ಟೋರೆಂಟ್ ಸಾಲ್ಟ್ ಬೇ ನಲ್ಲಿ ಊಟ ಮಾಡಿದ ನಾಲ್ವರು 38 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಬಿಲ್‌ನ ಸ್ಕ್ರೀನ್‌ಶಾಟ್ ಈಗ ಸಖತ್ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ವಿಚಲಿತಗೊಂಡಿದ್ದಾರೆ.
ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡಿದ 22 ವಿವಿಧ ಖಾದ್ಯಗಳನ್ನು ಬಿಲ್ ಪಟ್ಟಿ ಮಾಡಿದೆ. ಅಗ್ಗದ ಖಾದ್ಯದ ಬೆಲೆ 9 ಪೌಂಡ್ ಮತ್ತು ಟರ್ಕಿಶ್ ಚಹಾ ಉಚಿತವಾಗಿ ನೀಡಲಾಗಿದೆ. ಆದರೆ, ನೆಟ್ಟಿಗರ ಕಂಗೆಡಿಸಿದ್ದು ಮಾತ್ರ ಫ್ರೈಸ್, ಜೈಂಟ್ ಟೊಮಾಹಾಕ್ ಸ್ಟೀಕ್, ಬರ್ಗರ್, ಫ್ರಾನ್ಸ್ ಟೆಂಪುರಾ ರೋಲ್ಸ್ ಮುಂತಾದವುಗಳ ಬೆಲೆಗಳು.
ದೈತ್ಯ ಟೊಮಾಹಾಕ್ ಸ್ಟೀಕ್ ಬೆಲೆ 630 ಪೌಂಡ್ , ಗೋಲ್ಡನ್ ಬರ್ಗರ್ 100 ಪೌಂಡ್ ಮತ್ತು ಕೆಫೆಗಳು 200 ಪೌಂಡ್ ಆದ್ರೆ, ಒಟ್ಟು ಮೊತ್ತ 1,812 ಪೌಂಡ್ ಆಗಿದೆ. ಅಂದರೆ ಸುಮಾರು ರೂ 1.83 ಲಕ್ಷ.! ಇನ್ನು ಕೋಕಾ-ಕೋಲಾ ಲೈಟ್‌ಗೆ 18 ಪೌಂಡ್ ಇದ್ದರೆ, ಸಿಹಿ ಜೋಳಕ್ಕೆ 12 ಪೌಂಡ್ ನಿಗದಿಪಡಿಸಲಾಗಿದೆ. ಇದರಲ್ಲಿ ಸುಮಾರು 5000 ಪೌಂಡ್ ದಷ್ಟು ಸೇವಾ ಶುಲ್ಕ ಸೇರಿವೆ.
ನೆಟ್ಟಿಗರಂತೂ ಈ ಬಿಲ್ ಫೋಟೋ ನೋಡಿ ಹೌಹಾರಿದ್ದಾರೆ. ಕೆಲವರು ಇದನ್ನು ಲಂಡನ್ ನಂತಹ ನಗರದಲ್ಲಿ ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.