ರಾಜ್ಕೋಟ್: ಗುಜರಾತ್ನ ರಾಜ್ಕೋಟ್ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದನ್ನು ವ್ಯಸನ ಮಾಡಿಕೊಂಡಿದ್ದ ವ್ಯಕ್ತಿ ಇದಕ್ಕಾಗಿ ಮತ್ತು ತಾನು ಪ್ರೀತಿಸಿದ ಮಹಿಳೆಗೆ ಹಣ ಕೊಡಲು ಮಾಲೀಕನ ಖಾತೆಯಿಂದ 1 ಕೋಟಿ ರೂ. ಎಗರಿಸಿ ಪೊಲೀಸರ ಅತಿಥಿಯಾಗಿದ್ದಾನೆ.
ಪೊಲೀಸರ ಪ್ರಕಾರ, ತನ್ನ ಉದ್ಯೋಗದಾತರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸುವಂತೆ ಮಾಡಲು ಆತಷನ ಭಾವನೆಗಳನ್ನು ಪ್ರೀತಿಸಿದಾಕೆ ಬಳಸಿಕೊಂಡಳು ಎಂದು ಆರೋಪಿಸಲಾಗಿದೆ.
2019 ರಿಂದ 2020 ರ ನಡುವೆ ತುಷಾರ್ ಸೆಜ್ಪಾಲ್ ಎಂದು ಗುರುತಿಸಲಾದ ವ್ಯಕ್ತಿ 1 ಕೋಟಿ ರೂಪಾಯಿ ವಂಚಿಸಿದ್ದಾನೆ. ಗ್ರಾಫಿಕ್ ಡಿಸೈನರ್ ಇರ್ಫಾನ್ ಶೇಖ್ ಒಡೆತನದ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ತುಷಾರ್ ಸೇರಿ 7 ಮಂದಿ ವಿರುದ್ಧ ಕೇಸ್ ದಾಖಲಾಗಿದೆ.
ಇಂಟರ್ನೆಟ್ನಲ್ಲಿ ಪೋರ್ನ್ ವೀಕ್ಷಿಸಲು ಮತ್ತು ತಾನು ಪ್ರೀತಿಸುತ್ತಿದ್ದ ಮಹಿಳೆಗೆ ಹಣ ಕೊಡಲು ಈ ರೀತಿ ಮಾಡಿದ್ದಾನೆ. ಅಶ್ಲೀಲ ವ್ಯಸನಿಯಾಗಿರುವ ತುಷಾರ್ ವಯಸ್ಕರ ಚಿತ್ರಗಳನ್ನು ಅಂತರ್ಜಾಲದಲ್ಲಿ ವೀಕ್ಷಿಸಲು ಸಂಸ್ಥೆಯ ಬ್ಯಾಂಕ್ ಖಾತೆಯಿಂದ 16 ಲಕ್ಷ ರೂ. ವರ್ಗಾವಣೆ ಮಾಡಿದ್ದಾನೆ. ಅಲ್ಲದೇ, ಆನ್ಲೈನ್ನಲ್ಲಿ ಮಹಿಳೆಯ ಸಂಪರ್ಕ ಬೆಳೆಸಿ ಅವಳ ಬಗ್ಗೆ ಭಾವನೆಗಳನ್ನು ಬೆಳೆಸಿಕೊಂಡಿದ್ದಾನೆ. ಆಕೆಯನ್ನು ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ಸಪ್ನಾ ಎಂದು ಗುರುತಿಸಲಾಗಿದೆ.
ಸಪ್ನಾ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಹಣ ಪಾವತಿಸುವಂತೆ ಮಾಡಿದ್ದಾಳೆ. ಸಪ್ನಾಳನ್ನು ತೀವ್ರವಾಗಿ ಪ್ರೀತಿಸುತ್ತಿದ್ದ ತುಷಾರ್ ಅನೇಕ ಸಂದರ್ಭಗಳಲ್ಲಿ ಆಕೆಯ ಕೋರಿಕೆಯ ಮೇರೆಗೆ ಮಾಲೀಕನ ಖಾತೆಯಿಂದ ಹಣ ವರ್ಗಾಯಿಸಿದ್ದಾನೆ. ಇಲ್ಲಿಯವರೆಗೆ, ಇರ್ಫಾನ್ ಸಂಸ್ಥೆಯ ಬ್ಯಾಂಕ್ ಖಾತೆಯಿಂದ 85 ಲಕ್ಷ ರೂ. ವರ್ಗಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇರ್ಫಾನ್ ರಾಜ್ ಕೋಟ್ನಲ್ಲಿ ಮನೆ ಖರೀದಿಸಿದ್ದರು. ಸಾಲದ ಇಎಂಐ ಅನ್ನು ತುಷಾರ್ ನೋಡಿಕೊಳ್ಳುತ್ತಿದ್ದ. ಆದರೆ, ಕಂತುಗಳನ್ನು ಪಾವತಿಸುವ ಬದಲು, ಅವನು ಈ ಹಣವನ್ನು ಸಪ್ನಾಗೆ ಕೊಟ್ಟನು. ಹೀಗಾಗಿ, ತುಷಾರ್ ಇರ್ಫಾನ್ ಶೇಖ್ ಗೆ ಒಂದು ಕೋಟಿ ರೂಪಾಯಿ ವಂಚಿಸಿದ್ದಾನೆ.
ಇರ್ಫಾನ್ ರಾಜ್ಕೋಟ್ನ ಸಿಐಡಿ(ಅಪರಾಧ)ಯನ್ನು ಸಂಪರ್ಕಿಸಿದ್ದಾರೆ. ತುಷಾರ್, ಸಪ್ನಾ, ಆಕೆಯ ತಾಯಿ ಸೇರಿ ಹಲವರ ವಿರುದ್ಧ ವಂಚನೆ ದೂರು ದಾಖಲಿಸಲಾಗಿದ್ದು, ಆರೋಪಿ ತುಷಾರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.