alex Certify ಲಸಿಕೆ ಬೇಡವೆಂದು ನೆಲದ ಮೇಲೆ ಹೊರಳಾಡಿ ಗೋಳಿಟ್ಟ ವೃದ್ಧೆ..! ಮಹಿಳೆ ರಂಪಾಟ ಕಂಡು ಆರೋಗ್ಯ ಸಿಬ್ಬಂದಿ ಸುಸ್ತೋಸುಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಬೇಡವೆಂದು ನೆಲದ ಮೇಲೆ ಹೊರಳಾಡಿ ಗೋಳಿಟ್ಟ ವೃದ್ಧೆ..! ಮಹಿಳೆ ರಂಪಾಟ ಕಂಡು ಆರೋಗ್ಯ ಸಿಬ್ಬಂದಿ ಸುಸ್ತೋಸುಸ್ತು

ಕೊರೊನಾ ಮೂರನೇ ಅಲೆಯನ್ನು ತಡೆಯಬೇಕು ಅಂದರೆ ಕೊರೊನಾ ಲಸಿಕೆಯನ್ನು ಸ್ವೀಕರಿಸುವುದು ಅನಿವಾರ್ಯವಾಗಿದೆ. ದೇಶದಲ್ಲಿ ಕೊರೊನಾ ಲಸಿಕೆಯ ಅಭಿಯಾನ ಭರದಿಂದ ಸಾಗಿದ್ದು, ವರ್ಷದ ಅಂತ್ಯದೊಳಗೆ ದೇಶದ ಎಲ್ಲಾ ಪ್ರಜೆಗಳಿಗೆ ಕನಿಷ್ಟ ಕೊರೊನಾ ಲಸಿಕೆಯ ಮೊದಲ ಡೋಸ್ ಪೂರ್ಣಗೊಳಿಸಬೇಕು ಎಂಬ ಇರಾದೆಯನ್ನು ಕೇಂದ್ರ ಸರ್ಕಾರ ಹೊಂದಿದೆ.

’ಡೆಲ್ಟಾ’ ರೂಪಾಂತರಿ ವಿರುದ್ಧ ಶೇ.70 ರಷ್ಟು ಪರಿಣಾಮಕಾರಿ ರಷ್ಯಾ ಲಸಿಕೆ

ದೇಶದ ಪ್ರಜೆಗಳಿಗೆ ಲಸಿಕೆಯನ್ನು ತಲುಪಿಸಲು ಸರ್ಕಾರವು ಇನ್ನಿಲ್ಲದ ಪ್ರಯತ್ನಗಳನ್ನು ಮಾಡ್ತಿರುವ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಜುಮ್ಮನಕಟ್ಟಿ ಗ್ರಾಮದ ವಯೋವೃದ್ಧೆ ತನಗೆ ಕೋವಿಡ್​ ಲಸಿಕೆ ಬೇಡವೇ ಬೇಡವೆಂದು ರಂಪಾಟ ಮಾಡಿದ್ದಾರೆ.

ಚುಳಚವ್ವ ಗಿಡ್ಡನಾಯಕನಗಳ್ಳಿ ಎಂಬವರು ತಮಗೆ ಕೋವಿಡ್​ ಲಸಿಕೆ ಬೇಡವೆಂದು ನೆಲದ ಮೇಲೆ ಹೊರಳಾಡಿ ಕಣ್ಣೀರಿಟ್ಟಿದ್ದಾರೆ. ತಿಂಗಳ ಮಾಸಾಶನ ಬಂದ್​ ಮಾಡುತ್ತೇವೆ ಎಂದು ಹೇಳಿದರೂ ಕೂಡ ಒಪ್ಪದ ಚುಳಚವ್ವ ಕೊರೊನಾ ಲಸಿಕೆ ಹಾಕಲು ಮಾತ್ರ ಒಪ್ಪಿಲ್ಲ.

BIG BREAKING: ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಒಂದೇ ದಿನದಲ್ಲಿ 246 ಜನ ಮಹಾಮಾರಿಗೆ ಬಲಿ

ನಾನೊಬ್ಬ ಜೋಗಮ್ಮ, ನನಗೆ ಲಸಿಕೆ ಹಾಕಿದ ಬಳಿಕ ಏನಾದ್ರೂ ಆದರೆ ದೇವರ ಪೂಜೆ ಮಾಡೋದು ಯಾರು ಎಂದು ಹೇಳುತ್ತಾ ಗೋಳಿಟ್ಟಿದ್ದಾರೆ. ವೃದ್ಧೆಯ ಮನವೊಲಿಸುವಷ್ಟರಲ್ಲಿ ಆರೋಗ್ಯ ಸಿಬ್ಬಂದಿ ಫುಲ್ ಸುಸ್ತಾಗಿ ಹೋಗಿದ್ದಾರೆ.

https://www.youtube.com/watch?v=duDzOTgf9lE

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...