ರಷ್ಯಾ ಸರ್ಕಾರ ಮತ್ತು ಗಮಾಲಯಾ ಸೆಂಟರ್‌ನಿಂದ ಅಭಿವೃದ್ಧಿಪಡಿಸಲಾದ ಕೊರೊನಾ ತಡೆ ಲಸಿಕೆ ’ಸ್ಪುಟ್ನಿಕ್’ (ಒಂದೇ ಡೋಸ್) ಡೆಲ್ಟಾ ರೂಪಾಂತರಿ ಕೊರೊನಾ ವೈರಾಣುವನ್ನು ಹತ್ತಿಕ್ಕುವಲ್ಲಿ ಶೇ.70ರಷ್ಟು ಪರಿಣಾಮಕಾರಿ ಎಂದು ಕಂಪನಿ ಹೇಳಿಕೊಂಡಿದೆ.
ರಷ್ಯಾ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಮೂಲಕ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಸ್ಪುಟ್ನಿಕ್ ತಯಾರಿಕೆಗೆ ಒತ್ತು ನೀಡಲಾಗುತ್ತಿದೆ.
ಹಬ್ಬದ ದಿನವೇ ಘೋರ ಕೃತ್ಯ: ಸಾಂಬಾರ್ ಸರಿಯಾಗಿಲ್ಲವೆಂದು ತಾಯಿ, ತಂಗಿ ಮೇಲೆ ಫೈರಿಂಗ್ –ಇಬ್ಬರೂ ಸಾವು
ಸ್ಪುಟ್ನಿಕ್ ಪರಿಣಾಮಕಾರಿ ಗುಣವನ್ನು 28 ಸಾವಿರ ಜನರ ಮೇಲೆ ಪ್ರಯೋಗಿಸಲಾಗಿದ್ದು, ಕೇವಲ ಒಂದು ಡೋಸ್ ಮಾತ್ರವೇ ನೀಡಲಾಗಿದೆ. 2021ರ ಜುಲೈನಲ್ಲಿ ಮಾಸ್ಕೊದಲ್ಲಿ ಈ ಪ್ರಯೋಗ ನಡೆದಿದೆ ಎಂದು ಆರ್‌ಡಿಐಎಫ್ ಹೇಳಿಕೊಂಡಿದೆ.
ಪ್ರಮುಖವಾಗಿ ಕೊರೊನಾ ಸೋಂಕಿತರಲ್ಲಿ ಶ್ವಾಸಕೋಶದ ಸೋಂಕು ಗಂಭೀರಗೊಂಡು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿಯನ್ನು ‘ಸ್ಪುಟ್ನಿಕ್ ಲೈಟ್ ‘ ಲಸಿಕೆ ತಪ್ಪಿಸುತ್ತದೆ. 60 ವರ್ಷದೊಳಗಿನ ವಯಸ್ಸಿನವರಲ್ಲಿ ಶೇ. 75ರಷ್ಟು ಪರಿಣಾಮಕಾರಿಯಾಗಿ ಕೊರೊನಾ ವೈರಾಣು ವಿರುದ್ಧ ಹೋರಾಡಬಲ್ಲದು.
ಡೆಲ್ಟಾ ರೂಪಾಂತರಿಯು ಸೋಂಕಿತರ ದೇಹವನ್ನು ನಾಶಪಡಿಸುವುದರಿಂದಲೂ ಲಸಿಕೆ ರಕ್ಷಣೆ ನೀಡುತ್ತದೆ ಎಂದು ಆರ್‌ಡಿಐಎಫ್ ವಿಶ್ವಾಸ ವ್ಯಕ್ತಪಡಿಸಿದೆ.
ಈಗಾಗಲೇ ಜಗತ್ತಿನ 15 ರಾಷ್ಟ್ರಗಳಲ್ಲಿ ಸ್ಪುಟ್ನಿಕ್ ಲೈಟ್ ಲಸಿಕೆಯ ಸಾರ್ವಜನಿಕ ಬಳಕೆಗೆ ಸ್ಥಳೀಯ ಸರ್ಕಾರಗಳು ಒಪ್ಪಿಗೆ ನೀಡಿವೆ. ಇನ್ನೂ 30 ದೇಶಗಳಲ್ಲಿ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದೆ.