ನವದೆಹಲಿ: ಎರಡು ದಿನಗಳ ಕಾಲ ಸ್ಥಿರವಾಗಿದ್ದ ನಂತರ ಇಂದು ಸರ್ಕಾರಿ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮತ್ತೆ ಹೆಚ್ಚಿಸಿವೆ.
ರಾಷ್ಟ್ರ ರಾಜಧಾನಿಯಲ್ಲಿ, ಪೆಟ್ರೋಲ್ ಪ್ರತಿ ಲೀಟರ್‌ಗೆ 104.79 ರೂ. ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 93.52 ರೂ. ಮುಂಬೈನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 110.75 ರೂ.ಗೆ ಏರಿಕೆಯಾಗಿದೆ. 34 ಪೈಸೆ ಹೆಚ್ಚಳದಿಂದ ಪೆಟ್ರೋಲ್ ದರ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ. 37 ಪೈಸೆ ಏರಿಕೆಯ ನಂತರ ಒಂದು ಲೀಟರ್ ಡೀಸೆಲ್ ಬೆಲೆ 101.40 ರೂ.ಗೆ ಏರಿಕೆಯಾಗಿದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪ್ರತಿ ಲೀಟರ್‌ಗೆ ಕ್ರಮವಾಗಿ 105.43 ರೂ. ಮತ್ತು 96.63 ರೂ. ಆಗಿದ್ದು, ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 102.10 ರೂ. ಮತ್ತು ಡೀಸೆಲ್ ಲೀಟರ್ ಗೆ 97.93 ರೂ.ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 108.44 ರೂ., ಡೀಸೆಲ್ 99.26 ರೂ. ದರ ಇದೆ.
ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂನಂತಹ OMC ಗಳು ಇಂಧನ ಬೆಲೆಯನ್ನು ಹಿಂದಿನ 15 ದಿನಗಳ ಅಂತರರಾಷ್ಟ್ರೀಯ ಬೆಲೆಗಳು ಮತ್ತು ವಿದೇಶಿ ಷೇರು ವಿನಿಮಯಗಳ ಆಧಾರದ ಮೇಲೆ ಪರಿಷ್ಕರಿಸಲಾಗಿದೆ.
ಅಕ್ಟೋಬರ್ 4, 12 ಮತ್ತು 13 ಹೊರತುಪಡಿಸಿ ಈ ತಿಂಗಳು ಇಂಧನ ಬೆಲೆಗಳು ಏರಿಕೆ ಕಂಡಿವೆ ಮತ್ತು ಇದು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 30 ಪೈಸೆ ಹೆಚ್ಚಿಸಲಾಗಿದೆ. ಮಂಗಳವಾರ ಮತ್ತು ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್‌ಗೆ 100 ರೂ. ಆಗಿದೆ. ಕೇರಳ, ಕರ್ನಾಟಕ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಛತ್ತೀಸ್‌ಗಢ, ಮಧ್ಯ ಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಲೇಹ್‌ನಲ್ಲಿ ಡೀಸೆಲ್ ಬೆಲೆ 100 ರೂ. ಗಡಿ ದಾಟಿದೆ.
ಇಂಧನ ದರಗಳು ರಾಜ್ಯದಿಂದ ರಾಜ್ಯಕ್ಕೆ ಮತ್ತು ನಗರಗಳಲ್ಲಿ ಕೂಡ ಬದಲಾಗುತ್ತವೆ, ಇದು ಸ್ಥಳೀಯ ತೆರಿಗೆಗಳ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಸರಕು ಶುಲ್ಕಗಳ ಮೇಲೆ ಅವಲಂಬಿತವಾಗಿರುತ್ತದೆ. ವರದಿಗಳ ಪ್ರಕಾರ, ರಾಜಸ್ಥಾನವು ದೇಶದಲ್ಲಿ ಅತ್ಯಧಿಕ ವ್ಯಾಟ್ ವಿಧಿಸುತ್ತದೆ,