ನವರಾತ್ರಿಯ ಸಂಭ್ರಮದಲ್ಲಿ ದೇಶವೇ ಮುಳುಗಿರುವ ಈ ಸಂದರ್ಭದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕನ್ಯಾ ಪೂಜೆ ಮಾಡುವ ಮೂಲಕ ಮನೆಯಲ್ಲೇ ಹಬ್ಬ ಆಚರಿಸಿದ್ದಾರೆ.
ಕಂಜಕ್‌ನಿಂದ ಪುಟಾಣಿ ಮಕ್ಕಳನ್ನು ಆಹ್ವಾನಿಸಿದ್ದ ಶಿಲ್ಪಾ ಕನ್ಯಾ ಪೂಜೆ ಮಾಡುತ್ತಿರುವ ಚಿತ್ರಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ’ಜೈ ಮಾತಾ ದಿ’ ಎಂದು ಬರೆದಿರುವ ಸ್ಕಾರ್ಫ್ ಧರಿಸಿರುವ ಮಕ್ಕಳು ಹಲ್ವಾ, ಚನ್ನಾ, ಹಾಗೂ ಪೂರಿ ಸವಿಯುತ್ತಿರುವುದನ್ನು ಚಿತ್ರದಲ್ಲಿ ನೋಡಬಹುದಾಗಿದೆ.
ದಸರಾ ಹಬ್ಬದ ʼಮಹತ್ವʼ ವೇನು…? ಇಲ್ಲಿದೆ ಮಾಹಿತಿ
ಮಕ್ಕಳಿಗೆ ಆರತಿ ಮಾಡುತ್ತಿರುವ ವಿಡಿಯೋವನ್ನು ಶಿಲ್ಪಾ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ತಮ್ಮ ಮನೆಯಲ್ಲಿ ನವರಾತ್ರಿ ಆಚರಿಸುತ್ತಿರುವ ಚಿತ್ರಗಳನ್ನು ಶಿಲ್ಪಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಈ ವೇಳೆ ತಮ್ಮ ಪುತ್ರ ವಿಯಾನ್ ಹಾಗೂ ಮಗಳು ಶಮಿಶಾ ಜೊತೆಗೆ ಆರತಿ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡ ಶಿಲ್ಪಾ, “ನನ್ನ ಮಂಡೇ ಮೋಟಿವೇಶನ್….. ನನ್ನ ಮಕ್ಕಳು ನನ್ನ ನಂಬಿಕೆ. ಕೆಲವೊಂದು ವಿಷಯಗಳನ್ನು ನಾವು ಮಾಡಿ ತೋರಿಸದೇ ನಮ್ಮ ಮುಂದಿನ ಪೀಳಿಗೆಗೆ ತಲುಪಿಸಲು ಆಗುವುದಿಲ್ಲ. ನಮ್ಮ ಹೆತ್ತವರು ನಮಗೆ ಕಲಿಸಿದ ಮೌಲ್ಯಗಳನ್ನೇ ಅಳವಡಿಸಿಕೊಂಡು ನಮ್ಮ ಮಕ್ಕಳೂ ಬೆಳೆಯಬೇಕೆಂಬುದು ನಮ್ಮ ಆಸೆ. ಎಳೆಯ ವಯಸ್ಸಿನಲ್ಲೇ ಅವರಲ್ಲಿ ನಂಬಿಕೆಯ ಬೀಜ ಬಿತ್ತುವುದನ್ನು ನಾನು ಎದುರು ನೋಡುತ್ತಿದ್ದೆ,” ಎಂದು ಬರೆದುಕೊಂಡಿದ್ದರು.