ಐಟಿ ದೈತ್ಯ ಇನ್ಫೋಸಿಸ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭರ್ಜರಿ ಲಾಭ ಗಳಿಸಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ, ಇನ್ಫೋಸಿಸ್ ನ ಕ್ರೋಢಿಕೃತ ನಿವ್ವಳ ಲಾಭದಲ್ಲಿ ಶೇಕಡಾ 12ರಷ್ಟು ಏರಿಕೆಯಾಗಿದೆ. ಒಟ್ಟು 5,421 ಕೋಟಿ ರೂಪಾಯಿ ನಿವ್ವಳ ಲಾಭವೆಂದು ಕಂಪನಿ ವರದಿ ಮಾಡಿದೆ. ಹಿಂದಿನ ವರ್ಷ 4,845 ಕೋಟಿ ನಿವ್ವಳ ಲಾಭವಾಗಿತ್ತು.
ಈ ವರ್ಷ ಕ್ರೋಢಿಕರಣ ಆದಾಯವು ಶೇಕಡಾ 20ರಷ್ಟು ಹೆಚ್ಚಳ ಕಂಡು 29,602 ಕೋಟಿಗೆ ಏರಿದೆ. ಹಿಂದಿನ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 24,570 ಕೋಟಿಯಿತ್ತು. ಕಂಪನಿಯು FY22 ಗಾಗಿ ಆದಾಯವನ್ನು ಪರಿಷ್ಕರಿಸಿದೆ.
ಬಲವಾದ ಕಾರ್ಯಕ್ಷಮತೆ ಮತ್ತು ಬಲವಾದ ಬೆಳವಣಿಗೆಯ ದೃಷ್ಟಿಕೋನ ಇದಕ್ಕೆ ಕಾರಣ. ಜಾಗತಿಕ ಉದ್ಯಮಗಳು ತಮ್ಮ ಡಿಜಿಟಲ್ ಪ್ರಯಾಣವನ್ನು ವೇಗಗೊಳಿಸುವುದರೊಂದಿಗೆ ನಾವು ಬಲವಾದ ಮಾರುಕಟ್ಟೆ ಅವಕಾಶವನ್ನು ನೋಡುತ್ತಿದ್ದಂತೆ ಎಂದು ಸಿಇಒ ಮತ್ತು ಎಂಡಿ ಸಲೀಲ್ ಪರೇಖ್ ಹೇಳಿದ್ದಾರೆ. ಬುಧವಾರ, ಇನ್ಫೋಸಿಸ್ ಷೇರುಗಳು ಶೇಕಡಾ 1.43 ನಷ್ಟು ಏರಿಕೆಯಾಗಿ 1,709.20 ರೂಪಾಯಿಯಲ್ಲಿ ವಹಿವಾಟು ನಡೆಸಿದ್ದವು.