ಬಹುಭಾಷಾ ನಟಿ ಪೂಜಾ ಹೆಗ್ಡೆ 31ನೇ ವಸಂತಕ್ಕೆ ಕಾಲಿಟ್ಟಿದ್ದು ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ ‘ರಾಧೆಶ್ಯಾಮ್’ ಹಾಗೂ ಆಚಾರ್ಯ ಚಿತ್ರತಂಡ ಹೊಸ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.
ರಾಧಾಕೃಷ್ಣ ಕುಮಾರ್ ನಿರ್ದೇಶನದ ಪ್ರಭಾಸ್ ನಟನೆಯ ‘ರಾಧೆಶ್ಯಾಮ್’ ಚಿತ್ರದಲ್ಲಿ ಪ್ರೇರಣಾ ಎಂಬ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇಂದು ಅವರ ಹೊಸ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದ್ದಾರೆ. ಇನ್ನು ‘ಆಚಾರ್ಯ’ ಸಿನಿಮಾದಲ್ಲಿ ನೀಲಾಂಬರಿ ಪಾತ್ರದಲ್ಲಿ ರಾಮ್ ಚಾರಣ್ ಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಆಚಾರ್ಯ ಚಿತ್ರತಂಡ ಕೂಡ ಇಂದು ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಪೂಜಾ ಹೆಗ್ಡೆ ಲುಕ್ ರಿವೀಲ್ ಮಾಡಿದೆ.