alex Certify ಮೇಕೆ ಕುತ್ತಿಗೆಯಲ್ಲಿದ್ದ ಬೋರ್ಡ್​ ಕಂಡು ಸಿದ್ದರಾಮಯ್ಯಗೆ ಕಸಿವಿಸಿ​..! ಅಭಿಮಾನಿಯ ಪ್ರೀತಿಯ ಕಾಣಿಕೆಗೆ ನೋ ಎಂದ ಕಾಂಗ್ರೆಸ್​ ‘ಟಗರು’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಕೆ ಕುತ್ತಿಗೆಯಲ್ಲಿದ್ದ ಬೋರ್ಡ್​ ಕಂಡು ಸಿದ್ದರಾಮಯ್ಯಗೆ ಕಸಿವಿಸಿ​..! ಅಭಿಮಾನಿಯ ಪ್ರೀತಿಯ ಕಾಣಿಕೆಗೆ ನೋ ಎಂದ ಕಾಂಗ್ರೆಸ್​ ‘ಟಗರು’

ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಅಭಿಮಾನಿಗಳು ಪ್ರೀತಿಯಿಂದ ಕಾಂಗ್ರೆಸ್​ನ ಟಗರು ಅಂತಾನೇ ಕರೀತಾರೆ. ಕುರುಬ ಸಮುದಾಯದ ಪ್ರಬಲ ನಾಯಕರಾಗಿರುವ ಸಿದ್ದರಾಮಯ್ಯರಿಗೆ ಅಭಿಮಾನಿಗಳು ಪ್ರೀತಿಯಿಂದ ಅನೇಕ ಬಾರಿ ಮೇಕೆಯನ್ನು ಉಡುಗೊರೆಯಾಗಿ ನೀಡಿದ್ದುಂಟು. ಆದರೆ ಈ ಬಾರಿ ಮಾತ್ರ ಅಭಿಮಾನಿ ನೀಡಿದ್ದ ಮೇಕೆ ಉಡುಗೊರೆಗೆ ಸಿದ್ದರಾಮಯ್ಯ ನೋ ಎಂದಿದ್ದಾರೆ. ಇದಕ್ಕೆ ಕಾರಣ ಮೇಕೆಯ ಕುತ್ತಿಗೆಗೆ ಹಾಕಲಾಗಿದ್ದ ಬೋರ್ಡ್​..!

ಕಲಬುರಗಿ ಜಿಲ್ಲೆಯ ಅಫಜಲಪುರದ ಜೆ.ಎಂ. ಕೊರಬು ಫೌಂಡೇಶನ್​ ನಡೆಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ 10 ಸಾವಿರ ಕುಟುಂಬಗಳಿಗೆ ಕಿಟ್​ ವಿತರಣೆ ಮಾಡಿದ್ರು. ಈ ವೇಳೆ ಸಿದ್ದರಾಮಯ್ಯ ಅಭಿಮಾನಿ ರಮೇಶ್​ ಎಂಬವರು ತಮ್ಮ ನೆಚ್ಚಿನ ನಾಯಕನಿಗೆ ಮೇಕೆಯನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ.

ಆದರೆ ಮೇಕೆಯ ಕುತ್ತಿಗೆಗೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬೋರ್ಡ್ ಹಾಕಲಾಗಿತ್ತು. ಇದರಿಂದ ಕಸಿವಿಸಿಗೊಂಡ ಸಿದ್ದರಾಮಯ್ಯ ಈ ಉಡುಗೊರೆ ಸ್ವೀಕರಿಸಲು ನಿರಾಕರಿಸಿದ್ದಾರೆ. ವೇದಿಕೆಯಲ್ಲಿದ್ದ ಇತರೆ ಗಣ್ಯರು ಒತ್ತಾಯ ಮಾಡಿದರೂ ಸಹ ಸಿದ್ದರಾಮಯ್ಯ ಮಾತ್ರ ಈ ಉಡುಗೊರೆ ಸ್ವೀಕರಿಸಲು ಸುತಾರಾಂ ಒಪ್ಪಿಲ್ಲ. ನೆಚ್ಚಿನ ನಾಯಕ ಉಡುಗೊರೆ ಸ್ವೀಕರಿಸದ ಹಿನ್ನೆಲೆ ರಮೇಶ್​ ಮೇಕೆಯನ್ನು ವಾಪಸ್​ ಕೊಂಡೊಯ್ದಿದ್ದಾರೆ.

https://www.youtube.com/watch?v=ZLHCEO9IgrI

https://www.youtube.com/watch?v=0Ob7J_qTe_0&feature=youtu.be

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...