ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಆಭರಣದಂಗಡಿ ಸಿಬ್ಬಂದಿಯಿಂದ 72 ಲಕ್ಷ ರೂಪಾಯಿ ಕಿತ್ತುಕೊಂಡು ಪರಾರಿಯಾದ ಘಟನೆ ಉತ್ತರ ಪ್ರದೇಶದ ಬುಲಂದರ್ಶಹರ್ನಲ್ಲಿ ನಡೆದಿದೆ. ಈ ಸಂಬಂಧ ಆರೋಪಿಗಳ ವಿರುದ್ಧ ತನಿಖೆ ನಡೆಸಲಾಗ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾಸ್ಗಂಜ್ ಜಿಲ್ಲೆಯ ಸಹವಾರ್ ಗೇಟ್ನ ನಿವಾಸಿಯಾದ ತಾನಾಜಿ ನಾಯ್ಕ್ ಈ ಪ್ರಕರಣ ಸಂಬಂಧ ದೂರನ್ನು ನೀಡಿದ್ದಾರೆ, ತಾನಾಜಿ ದೆಹಲಿಯ ಚಾಂದನಿ ಚೌಕ್ನಲ್ಲಿ ಚಿನ್ನ ಖರೀದಿ ಮಾಡುವ ಸಲುವಾಗಿ ಸ್ನೇಹಿತನ ಜೊತೆ ಪ್ರಯಾಣ ಬೆಳೆಸಿದ್ದರು. ಇದಕ್ಕಾಗಿ ತಾನಾಜಿ 72 ಲಕ್ಷ ರೂಪಾಯಿಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು.
ನಿದ್ರೆಗಣ್ಣಿನಲ್ಲಿ ಬಂದವಳಿಗೆ ಟಾಯ್ಲೆಟ್ ನಲ್ಲಿ ಕಂಡಿದ್ದೇನು…..?
ಮಾರ್ಗಮಧ್ಯದಲ್ಲಿ ತಾನಾಜಿಯ ಕಾರನ್ನು ಬಿಳಿ ಬಣ್ಣದ ಬೊಲೆರೋ ಕಾರು ಖುರ್ಜಾದ ಅಗರ್ವಾಲ್ ಮೇಲ್ಸೇತುವೆ ಬಳಿಯಲ್ಲಿ ಅಡ್ಡಗಟ್ಟಿದೆ. ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಗಳು ತಮ್ಮನ್ನು ತಾವು ಐಟಿ ಇಲಾಖೆ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ.
ಅಧಿಕಾರಿಗಳು ಎಂದು ಹೇಳಿಕೊಂಡ ಆರೋಪಿಗಳು ತಾನಾಜಿ ಬಳಿ ವಿವಿಧ ದಾಖಲೆಗಳನ್ನು ಕೇಳಿದ್ದಾರೆ. ಆರೋಪಿಗಳ ಪೈಕಿ ಓರ್ವ ಹಣದ ಬ್ಯಾಗನ್ನು ಕಸಿದುಕೊಂಡು ತಮ್ಮ ಕಾರನ್ನು ಹಿಂಬಾಲಿಸುವಂತೆ ಹೇಳಿದ್ದಾರೆ. ಸ್ವಲ್ಪ ದೂರ ಸಾಗುತ್ತಿದ್ದಂತೆಯೇ ಅವರು ಪರಾರಿಯಾಗಿದ್ದಾರೆ.
ಜನಸಾಮಾನ್ಯರ ಜೇಬಿಗೆ ಕತ್ತರಿ: ತೈಲದ ಜೊತೆಗೆ ಅಗತ್ಯವಸ್ತು ತರಕಾರಿ, ದಿನಸಿ, ತಿಂಡಿ –ತಿನಿಸು ಕೂಡ ದುಬಾರಿ
ಈ ಸಂಬಂಧ ಖುರ್ಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ವಂಚನೆ ಪ್ರಕರಣ ದಾಖಲಾಗಿದೆ. ದೂರಿನ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ಖುರ್ಝಾ ಎಸ್ಹೆಚ್ಓ ನೀರಜ್ ಕುಮಾರ್ ಸಿಂಗ್ ಹೇಳಿದ್ದಾರೆ.