ಅತಿ ಹೆಚ್ಚು ಲಾಭ ಬರುವ ಯೋಜನೆಯಲ್ಲಿ ಜನರು ಹೂಡಿಕೆ ಮಾಡಲು ಬಯಸ್ತಾರೆ. ಹೂಡಿಕೆ ಮಾಡುವ ಮೊದಲು ಒಳ್ಳೆ ಯೋಜನೆಯ ಹುಡುಕಾಟ ನಡೆಸ್ತಾರೆ. ನೀವೂ ಉತ್ತಮ ಹೂಡಿಕೆಯ ಹುಡುಕಾಟದಲ್ಲಿದ್ದರೆ ಎಸ್‌ಬಿಐನ ಕೆಲ ಯೋಜನೆಗಳು ನಿಮಗೆ ಲಾಭ ನೀಡಲಿವೆ.
ದೇಶದ ಅತಿದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಆಯ್ಕೆಗಳಲ್ಲಿ ಒಂದಾಗಿದೆ. ಎಸ್‌ಬಿಐ ತನ್ನ ಗ್ರಾಹಕರಿಗೆ ಸ್ಥಿರ ಠೇವಣಿ, ಸಾರ್ವಜನಿಕ ಭವಿಷ್ಯ ನಿಧಿ ಮೂಲಕ ಹಣ ಉಳಿಸುವ ಆಯ್ಕೆ ನೀಡುತ್ತದೆ. ಎಸ್‌ಬಿಐನ ಕೆಲ ಯೋಜನೆಯಲ್ಲಿ ಹೂಡಿಕೆ ಮಾಡಿ, ನೀವು ಪ್ರತಿ ತಿಂಗಳು ಹಣ ಗಳಿಸಬಹುದು.
ಎಸ್‌ಬಿಐನ ಸ್ಥಿರ ಠೇವಣಿ ಅಂದರೆ ಎಫ್ಡಿಯಲ್ಲಿ ಹೂಡಿಕೆ ಮಾಡಬಹುದು. ಸಂಪೂರ್ಣ ಮೊತ್ತವನ್ನು ಒಂದೇ ಬಾರಿಗೆ ಬ್ಯಾಂಕ್‌ಗೆ ಜಮಾ ಮಾಡಬೇಕಾಗುತ್ತದೆ. ಇದ್ರಲ್ಲಿ ಮಾಸಿಕ ಬಡ್ಡಿ ಸಿಗುತ್ತದೆ. ಈ ಯೋಜನೆ 5 ವರ್ಷಗಳು, 7 ವರ್ಷಗಳು ಮತ್ತು 10 ವರ್ಷಗಳ ಅವಧಿ ಹೊಂದಿದೆ. ಹೂಡಿಕೆಗೆ ಮಿತಿಯಿಲ್ಲ.
3 ವರ್ಷದಿಂದ 5 ವರ್ಷದೊಳಗಿನ ಹೂಡಿಕೆಯ ಮೇಲೆ ಶೇಕಡಾ 5.30 ರಷ್ಟು ಬಡ್ಡಿ ಸಿಗುತ್ತದೆ. 5 ವರ್ಷಗಳಿಗಿಂತ ಹೆಚ್ಚು ಆದರೆ 10 ವರ್ಷಗಳಿಗಿಂತ ಕಡಿಮೆ ಅವಧಿಗೆ ಹೂಡಿಕೆ ಮಾಡಿದ್ರೆ ಶೇಕಡಾ 5.40 ದರದಲ್ಲಿ ಬಡ್ಡಿ ಸಿಗುತ್ತದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತದ ಶೇಕಡಾ 75 ರಷ್ಟು ಹಣದ ಮೇಲೆ ಓವರ್‌ಡ್ರಾಫ್ಟ್ ಅಥವಾ ಸಾಲ ಸೌಲಭ್ಯವೂ ಲಭ್ಯವಿದೆ.