ಬೆಂಗಳೂರು: ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ದಿನಸಿ, ತರಕಾರಿ ಮೊದಲಾದ ವಸ್ತುಗಳ ದರ ಹೆಚ್ಚಳವಾಗಿದ್ದು, ದರ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ.
ಸಿಮೆಂಟ್, ಸ್ಟೀಲ್ ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ದರ ಶೇಕಡ 10 ರಷ್ಟು ಏರಿಕೆಯಾಗಿದೆ. ತೊಗರಿಬೇಳೆ, ಟ್ಯಾಕ್ಸಿ, ಅಡುಗೆ ಅನಿಲ ಸಿಲಿಂಡರ್ ದರ, ಹೋಟೆಲ್ ಗಳಲ್ಲಿ ತಿಂಡಿ ತಿನಿಸು ದರ ಕೂಡ ದುಬಾರಿಯಾಗಿದೆ.
ಕೊರೋನಾ ಸಂಕಷ್ಟದ ಕಾಲದಲ್ಲಿ ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಡೀಸೆಲ್ ದರ ಕೂಡ ಹೆಚ್ಚಳವಾಗಿರುವುದರಿಂದ ಪರಿಣಾಮ ಬೀರಿದೆ. ಸರಕು ಸಾಗಾಣಿಕೆ ವೆಚ್ಚಗಳ ಬೆಲೆ ನಾಗಾಲೋಟದಲ್ಲಿ ಮುಂದುವರೆದಿದೆ. ಸರಕು ಸಾಗಾಣಿಕೆ ವೆಚ್ಚ ಹೆಚ್ಚಾಗಿ ಅಗತ್ಯವಸ್ತುಗಳ ಜೊತೆಗೆ ಕಟ್ಟಡ ನಿರ್ಮಾಣ ಸಾಮಗ್ರಿ, ತಿಂಡಿ-ತಿನಿಸುಗಳ ಬೆಲೆ ಏರಿಕೆಗೆ ಕಾರಣವಾಗಿದೆ.