ನವರಾತ್ರಿ ಹಬ್ಬವನ್ನು ದೇಶದಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಗ್ತಿದೆ. ಕೊರೊನಾ ಪ್ರೋಟೊಕಾಲ್ ಮಧ್ಯೆಯೇ ದೇವಸ್ಥಾಗಳಲ್ಲಿ ಪೂಜೆಗಳು ನಡೆಯುತ್ತಿವೆ. ಈ ಬಾರಿ ಅಷ್ಠಮಿ ಯಾವಾಗ ಬಂದಿದೆ ಎಂಬ ಗೊಂದಲ ಅನೇಕರಿಗಿದೆ. ಸಾಮಾನ್ಯವಾಗಿ ಮಹಾ ಅಷ್ಠಮಿಯನ್ನು ನವಮಿಯ ಮೊದಲ ದಿನ ಆಚರಣೆ ಮಾಡಲಾಗುತ್ತದೆ.
ಈ ಬಾರಿ ಅಕ್ಟೋಬರ್ 13 ಅಂದ್ರೆ ಇಂದು ಅಷ್ಠಮಿ ಆಚರಣೆ ಮಾಡಲಾಗ್ತಿದೆ. ಅಷ್ಠಮಿಯಂದು 10 ವರ್ಷದೊಳಗಿನ ಹುಡುಗಿಯರ ಪೂಜೆ ಮಾಡುವುದು ವಿಶೇಷ. ಕನ್ಯೆ ಪೂಜೆ ಮಾಡುವ ಜನರು ಸಪ್ತಮಿಯಂದು ಉಪವಾಸವಿರ್ತಾರೆ. ಇಡೀ ನವರಾತ್ರಿಯಲ್ಲಿ ಅಷ್ಟಮಿ ಮತ್ತು ನವಮಿಗೆ ವಿಶೇಷ ಪ್ರಾಮುಖ್ಯತೆಯಿದೆ. ಈ ಎರಡು ದಿನ ವಿಶೇಷ ಪೂಜೆ ನಡೆಯುತ್ತದೆ. ಪೂಜೆ ಮಾಡುವ ಮೊದಲು ಶುಭ ಸಮಯ ಮತ್ತು ವಿಧಾನವನ್ನು ತಿಳಿದಿರಬೇಕು.
ಅಷ್ಟಮಿಯ ದಿನ ದುರ್ಗಾದೇವಿಯ ಎಂಟನೆಯ ರೂಪವನ್ನು ಅಂದರೆ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಅಷ್ಟಮಿ ಮುಗಿಯುವ ಹಂತದಲ್ಲಿರುವಾಗ ಮತ್ತು ನವಮಿ ಆರಂಭವಾಗುವ ಸಂದರ್ಭದಲ್ಲಿ ಪೂಜೆ ಮಾಡುವುದು ಮಂಗಳಕರ. ಇವೆರಡರ ನಡುವೆ ಸುಮಾರು 48 ನಿಮಿಷಗಳ ಅವಧಿ ಇರುತ್ತದೆ. ಹವನಕ್ಕೆ ಶುಭ ಸಮಯ ಸಂಜೆ 7 ಗಂಟೆ 42 ರಿಂದ 8 ಗಂಟೆ 7 ನಿಮಿಷದವರೆಗೆ ಇರಲಿದೆ. ಈ ಸಮಯದಲ್ಲಿ ಪೂಜೆ ಮಾಡುವುದ್ರಿಂದ ವಿಶೇಷ ಫಲ ಲಭಿಸಲಿದೆ.