alex Certify ಪತ್ನಿಗೆ ವಿಭಿನ್ನ ಶೈಲಿಯ ಮನೆ ನಿರ್ಮಿಸಿ ಅರ್ಪಿಸಿದ 72 ವರ್ಷದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಗೆ ವಿಭಿನ್ನ ಶೈಲಿಯ ಮನೆ ನಿರ್ಮಿಸಿ ಅರ್ಪಿಸಿದ 72 ವರ್ಷದ ಪತಿ

ತಾಜ್ ಮಹಲ್ ಬಗ್ಗೆ ನಿಮಗೆ ಗೊತ್ತೇ ಇದೆ. ತನ್ನ ಪ್ರೀತಿಯ ಮಡದಿಯ ನೆನಪಿಗಾಗಿ ಷಹಜಹಾನ್ ನಿರ್ಮಿಸಿದ ಸ್ಮಾರಕ ತಾಜ್ ಮಹಲ್. ಹಾಗೆಯೇ ಉತ್ತರ ಬೋಸ್ನಿಯೋದ 72 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಗಾಗಿ ಪ್ರೀತಿಯ ದ್ಯೋತಕವಾಗಿ ಮನೆ ನಿರ್ಮಿಸಿದ್ದಾನೆ. ಆದರೆ, ಈತ ತನ್ನ ಪತ್ನಿ ಬದುಕಿರುವಾಗಲೇ ವಿಶೇಷವಾದ ಮನೆ ನಿರ್ಮಿಸಿ ಆಕೆಗೆ ಅರ್ಪಿಸಿದ್ದಾನೆ.

72 ವರ್ಷದ ಪತಿ ವಾಯ್ಜಿನ್ ಕ್ಯೂಸಿಕ್ ಎಂಬಾತ ವಿಭಿನ್ನವಾದ ಮನೆಯನ್ನು ನಿರ್ಮಿಸಿ ಅದನ್ನು ಪ್ರೀತಿಯ ಪತ್ನಿಗೆ ಅರ್ಪಿಸಿದ್ದಾನೆ. ಮನೆಯ ಮುಂಭಾಗವು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದರೆ, ಕೆಂಪು ಲೋಹದ ಛಾವಣಿ ಮತ್ತು ವಸ್ತುಗಳನ್ನು ತಾಜಾ ಮತ್ತು ಪ್ರಕಾಶಮಾನವಾಗಿಡಲು ಹಲವಾರು ಕಿಟಕಿಗಳನ್ನು ಹೊಂದಿದೆ. ಆದರೆ, ಇದರ ಮುಖ್ಯ ವೈಶಿಷ್ಟ್ಯವೆಂದರೆ ಈ ಮನೆಯು ಸಂಪೂರ್ಣವಾಗಿ ವೃತ್ತಾಕಾರದಲ್ಲಿ ತಿರುಗತ್ತದೆ.

BIG BREAKING: ಬಹಿರಂಗವಾಯ್ತು BSY ಆಪ್ತರ ಮನೆ ಮೇಲೆ ಐಟಿ ದಾಳಿ ರಹಸ್ಯ, 750 ಕೋಟಿ ಅಕ್ರಮ ಆಸ್ತಿ ಪತ್ತೆ

ತನ್ನ ಹೆಂಡತಿಯ ಆಸೆಗಳನ್ನು ಪೂರೈಸಲು ಹಾಗೂ ಅವಳು ಕಿಟಕಿಯಿಂದ ಹೊರಗೆ ನೋಡಿದಾಗ ಅವಳು ಏನನ್ನು ನೋಡಲು ಬಯಸುತ್ತಾಳೆ ಅದನ್ನು ನೋಡುವುದಕ್ಕಾಗಿ ಕುಸಿಕ್ ಈ ಮನೆಯನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಿದ್ದಾನೆ.

ನಾಯಿಯ ಮುಗ್ಧತೆಯ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕುಸಿಕ್ ತನ್ನ ಕುಟುಂಬ ವ್ಯವಹಾರದಿಂದ ನಿವೃತ್ತನಾದ ಬಳಿಕ ಹಾಗೂ ಎಲ್ಲಾ ಜವಾಬ್ದಾರಿಗಳನ್ನು ತಮ್ಮ ಮಕ್ಕಳಿಗೆ ವಹಿಸಿದ ನಂತರವೇ ಈ ಮನೆಯನ್ನು ನಿರ್ಮಿಸಿದ್ದಾಗಿ ಹೇಳಿದ್ದಾರೆ. ತಮ್ಮ ಹಿಂದಿನ ಮನೆಯ ಬೆಡ್ ರೂಂನಲ್ಲಿ ಸೂರ್ಯನ ಬೆಳಕೇ ಬೀಳುವುದಿಲ್ಲ ಎಂದು ಪತ್ನಿ ಲುಬಿಕಾ ದೂರಿದ್ದರಂತೆ. ಅದಕ್ಕಾಗಿ ಇಷ್ಟು ವರ್ಷಗಳ ಬಳಿಕ ಕುಸಿಕ್ ತಮ್ಮ ಪತ್ನಿಯ ಬಯಕೆಯನ್ನು ನೆರವೇರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...