ಮನೆಗಳ ಮೇಲೆ ಪತನಗೊಂಡ ವಿಮಾನ: ಭೀಕರ ಅವಘಡದಲ್ಲಿ ಇಬ್ಬರು ಬಲಿ 12-10-2021 2:26PM IST / No Comments / Posted In: Latest News, Live News, International ಕ್ಯಾಲಿಫೋರ್ನಿಯಾದ ಜನದಟ್ಟಣೆ ಇರುವ ಪ್ರದೇಶದಲ್ಲಿ ಸಣ್ಣ ವಿಮಾನವೊಂದು ದುರಂತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ ವಿಮಾನ ಪತನವಾದ ಬಳಿಕ ಉಂಟಾದ ಬೆಂಕಿಗೆ ಎರಡು ಮನೆಗಳು ಸೇರಿದಂತೆ ಸಾಕಷ್ಟು ವಾಹನಗಳು ಆಹುತಿಯಾಗಿವೆ. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಘಟನಾ ಸ್ಥಳವಾದ ಸ್ಯಾನ್ ಡಿಯಾಗೋದ ಉಪನಗರವಾದ ಸಾಂಟಿಗೆ ಆಗಮಿಸಿದ್ದು ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಿದ್ದಾರೆ. ಫಾಕ್ಸ್ 5 ಸ್ಯಾನ್ ಡಿಯಾಗೋ ವಿಮಾನವು ಅವಳಿ ಎಂಜಿನ್ ಸೆಸೆನಾ 340ಯಾಗಿದೆ, ಆರು ಸೀಟುಗಳನ್ನು ಹೊಂದಿರುವ ವಿಮಾನ ಇದಾಗಿದ್ದು ಅರಿಜೋನಾದ ಯುಮಾದಿಂದು ಹೊರಟಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. Plane crash in #Santee, #California.pic.twitter.com/btP9TgyFVP — Kiriti (@in20im) October 11, 2021