ಬಿ.ಎಸ್ ಯಡಿಯೂರಪ್ಪ ಆಪ್ತರ ನಿವಾಸಗಳ ಮೇಲೆ ನಡೆದ ಐಟಿ ದಾಳಿಗಳ ಬಗ್ಗೆ ಪರ – ವಿರೋಧಗಳ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಬಿಎಸ್ವೈ ಆಪ್ತರ ಮೇಲೆ ಈ ಐಟಿ ದಾಳಿ ನಡೆಸಿದ್ದೇ ಸಿದ್ದರಾಮಯ್ಯ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಕಲ ಸಮೃದ್ಧಿ ಪ್ರಾಪ್ತಿಗಾಗಿ ನವರಾತ್ರಿಯಲ್ಲಿ ಪೂಜಿಸಿ ದುರ್ಗಾ ಮಾತೆಯ ಒಂಬತ್ತು ರೂಪ…!
ಐಟಿ ದಾಳಿ ನಡೆದಿದ್ದರ ಹಿಂದೆ ರಾಜಕೀಯ ದುರುದ್ದೇಶವಿದೆ. ಯಡಿಯೂರಪ್ಪರನ್ನು ಕಪಿಮುಷ್ಠಿಯಲ್ಲಿಡಲು ಸಿದ್ದರಾಮಯ್ಯ ಈ ಪ್ಲಾನ್ ಮಾಡಿದ್ದಾರೆ. ಸಿದ್ದರಾಮಯ್ಯ ಕುತಂತ್ರ ರಾಜಕಾರಣ ಮಾಡಿದ್ದಾರೆ. ಯಡಿಯೂರಪ್ಪ – ಸಿದ್ದರಾಮಯ್ಯ ಇಬ್ಬರು ಮಧ್ಯರಾತ್ರಿ ಭೇಟಿ ಮಾಡಿದ್ದರು. ಕೇಂದ್ರ ಸರ್ಕಾರಕ್ಕೆ ಇದರ ಬಗ್ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಹೀಗಾಗಿ ಸಿದ್ದರಾಮಯ್ಯ ಯಡಿಯೂರಪ್ಪರನ್ನು ಕಂಟ್ರೋಲ್ನಲ್ಲಿಡಲು ಈ ಪ್ಲಾನ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯರಿಗೆ ಹೇಗಾದರೂ ಮಾಡಿ ಅಧಿಕಾರ ಪಡೆಯಬೇಕೆಂಬ ದುರುದ್ದೇಶವಿದೆ. ಇದೇ ಕಾರಣಕ್ಕೆ ಅವರು ಐಟಿ ದಾಳಿಯನ್ನು ಅಸ್ತ್ರವಾಗಿ ಪ್ರಯೋಗಿಸಿದ್ದಾರೆ. ನಾನು ಇದನ್ನು ಬಹಿರಂಗವಾಗಿಯೇ ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.