ಖಾಸಗಿ ಆಸ್ಪತ್ರೆಗಳು ಪ್ರತಿ ದಿನ ನೀಡುವ ಲಸಿಕೆ ಡೇಟಾ ತನ್ನ ಬಳಿ ಇಲ್ಲ ಎಂದು ಸರ್ಕಾ ಹೇಳಿಕೊಂಡಿದೆ.
ಖಾಸಗಿ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಪೂರೈಕೆದಾರರು ಪ್ರತಿ ದಿನ ಕೋವಿಡ್ 19 ವಿರುದ್ಧದ ಲಸಿಕೆ ನೀಡುತ್ತಿದ್ದಾರೆ. ಆದರೆ, ಅದರ ಬಗ್ಗೆ ಮಾಹಿತಿ ಕೇಂದ್ರದ ಬಳಿ ಇಲ್ಲವಾಗಿದೆ ಎಂಬುದು ಆರ್.ಟಿ.ಐ.ನಿಂದಾಗಿ ಗೊತ್ತಾಗಿದೆ.
ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಇರಲಿದೆ ವರುಣನ ಅಬ್ಬರ: ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಆರ್.ಟಿ.ಐ. ಕಾರ್ಯಕರ್ತ ಲೋಕೇಶ್ ಬಾತ್ರಾ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಗೆ ಕೇಂದ್ರ ಆರೋಗ್ಯ ಸಚಿವಾಲಯ ಉತ್ತರ ನೀಡಿದೆ.
ಖಾಸಗಿ ಆಸ್ಪತ್ರೆಗಳು, ಸಂಸ್ಥೆಗಳು ನೇರವಾಗಿ ಲಸಿಕೆಗಳನ್ನು ತಯಾರಕರಿಂದ ನೇರವಾಗಿ ಖರೀದಿಸುತ್ತಿವೆ. ಈ ಮಾಹಿತಿಯನ್ನು ನಿರ್ವಹಿಸುತ್ತಿಲ್ಲ ಮತ್ತು ಮಾಹಿತಿ ಲಭ್ಯವಿಲ್ಲ ಎಂಬುದು ಸರ್ಕಾರದ ಸ್ಪಷ್ಟ ಉತ್ತರವಾಗಿದೆ.
ಲಸಿಕೆ ತಯಾರಕರು ಮತ್ತು ಖಾಸಗಿ ಆಸ್ಪತ್ರೆಗಳು, ಸಂಸ್ಥೆಗಳು ಇತ್ಯಾದಿ ಸಂಬಂಧಿಸಿದ ಡೇಟಾವನ್ನು ಕೇಳಲಾಗಿತ್ತು. ಪ್ರತ್ಯೇಕ ವ್ಯಾಕ್ಸಿನೇಷನ್ ಡೇಟಾ ಲಭ್ಯವಿಲ್ಲ. ಆದರೂ ವ್ಯಾಕ್ಸಿನೇಷನ್ ಡೇಟಾವನ್ನು ಈ ಕೆಳಗಿನ ಲಿಂಕ್ನಲ್ಲಿ ಪರಿಶೀಲಿಸಲಬಹುದೆಂದು ಸರ್ಕಾರ ಹೇಳಿದೆ. https://dashboard.cowin.gov.in/ (sic).