ಕೊಲ್ಕತ್ತಾದಲ್ಲಿ ಭರ್ಜರಿಯಾಗಿ ಆಚರಣೆಯಾಗುವ ದುರ್ಗಾ ಪೂಜೆಯಲ್ಲಿ ಈ ಬಾರಿ ವಿಶೇಷ ಆಕರ್ಷಣೆಗಳು ಗಮನ ಸೆಳೆಯುತ್ತಿವೆ. ವಿವಿಧ ಥೀಮ್ ಗಳು ಜನರನ್ನು ಆಕರ್ಷಿಸುತ್ತಿದ್ದು, ಪೆಂಡಾಲ್ ಗಳು ಕೇವಲ ಪೂಜೆಗೆ ಸೀಮಿತವಾಗದೇ ವಿಷಯಾಧಾರಿತವಾಗಿರುವುದು ವಿಶೇಷ ಸಂಗತಿಯಾಗಿದೆ.
ಸಕಲ ಸಮೃದ್ಧಿ ಪ್ರಾಪ್ತಿಗಾಗಿ ನವರಾತ್ರಿಯಲ್ಲಿ ಪೂಜಿಸಿ ದುರ್ಗಾ ಮಾತೆಯ ಒಂಬತ್ತು ರೂಪ…!
ಎನ್ ಆರ್ ಸಿಯಿಂದ ಹೊರಗುಳಿಯುವವರ ದುಃಸ್ಥಿತಿ ಮತ್ತು ವಲಸಿಗರ ಸಮಸ್ಯೆಯನ್ನು ತೋರಿಸುವ ಒಂದು ಥೀಮ್ ಬರೀಷಾ ಕ್ಲಬ್ ನ ಈ ವರ್ಷದ ದುರ್ಗಾ ಪೆಂಡಾಲ್ ನಲ್ಲಿ ಥೀಮ್ ಮಾಡಿಕೊಳ್ಳಲಾಗಿದೆ.
ನವರಾತ್ರಿಯಂದು ಮಾಡಿ ʼಪನ್ನೀರ್ ಖೀರ್ʼ
ಈ ಪೆಂಡಾಲ್ ನಲ್ಲಿ ಎರಡು ಭಾಗಗಳಿದ್ದು, ಒಂದು ಕಡೆ ಬಾಂಗ್ಲಾ ದೇಶವನ್ನು ಚಿತ್ರಿಸಿದರೆ ಬಲಭಾಗವು ಭಾರತದ ಗಡಿಯನ್ನು ಪ್ರತಿನಿಧಿಸುತ್ತದೆ. ಎರಡು ಭಾಗದ ನಡುವಿನ ಗಡಿ ನೋ ಮ್ಯಾನ್ಸ್ ಲ್ಯಾಂಡ್ ನಲ್ಲಿ ದುರ್ಗಾ ಮೂರ್ತಿಯನ್ನು ಹೊತ್ತ ಅಳುತ್ತಾ ನಿಂತಿರುವ ಮಹಿಳೆಯ ಪ್ರತಿಕೃತಿ ಇದೆ. ನಾಲ್ಕು ಮಕ್ಕಳಿಂದ ಸುತ್ತುವರಿದ ಮಹಿಳೆ ನಿರಾಶ್ರಿತ ಕುಟುಂಬಗಳನ್ನು ಪ್ರತಿನಿಧಿಸುವಂತೆ ತೋರುತ್ತದೆ. ಪೌರತ್ವ ಕಳೆದುಕೊಂಡ ಕುಟುಂಬಗಳ ಸ್ಥಿತಿಯನ್ನು ತೋರುವಂತೆ ಅಲ್ಲಿ ಚಿತ್ರಣ ಕಟ್ಟಿಕೊಡಲಾಗಿದೆ. ಇದನ್ನು ದೇವಯಾನ್ ಪ್ರಮಾಣಿಕ್, ಪ್ರತಾಪ್ ಮಜುಂದಾರ್ ಮತ್ತು ಸುಮಿತ್ ಬಿಸ್ವಾಸ್ ರಚಿಸಿದ್ದಾರೆ.