ಡೆಹ್ರಾಡೂನ್: ಉತ್ತರಾಖಂಡದ ಸಾರಿಗೆ ಸಚಿವ ಯಶಪಾಲ್ ಆರ್ಯ ಹಾಗೂ ಅವರ ಪುತ್ರ ಶಾಸಕ ಸಂಜೀವ್ ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೆವಾಲಾ ಮತ್ತು ಹರೀಶ್ ರಾವತ್ ಅವರ ಸಮ್ಮುಖದಲ್ಲಿ ಉತ್ತರಾಖಂಡದ ಸಾರಿಗೆ ಸಚಿವರು ಮತ್ತು ಪುತ್ರನೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರುವ ಮೊದಲು ಅವರು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. 2017 ರಿಂದ 14 ರವರೆಗೆ ಉತ್ತರಾಖಂಡದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಯಶಪಾಲ್, ನಂತರ ವಿಧಾನಸಭೆ ಸ್ಪೀಕರ್ ಆಗಿ ಹರೀಶ್ ರಾವತ್ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಅವರು ಮತ್ತೆ ಕಾಂಗ್ರೆಸ್ ಗೆ ಮರಳಿದ್ದಾರೆ.