ಬೆಂಗಳೂರು: ನನ್ನ ಹೇಳಿಕೆಯ ಉದ್ದೇಶ ತಪ್ಪಾಗಿ ಅರ್ಥೈಸಿರುವುದು ದುರದೃಷ್ಟಕರ ಎಂದು ವಿವಾದಾತ್ಮಕ ಹೇಳಿಕೆ ಕುರಿತಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಏಕಾಂಗಿಯಾಗಿ ಜೀವನ ನಡೆಸುವ ಮಹಿಳೆಯರ ಬಗ್ಗೆ ನಾನು ಹೇಳಿಕೆ ನೀಡಿಲ್ಲ. ನಾನು ಕೂಡ ಇಬ್ಬರು ಹೆಣ್ಣುಮಕ್ಕಳ ತಂದೆ ಹಾಗೂ ವೈದ್ಯನಾಗಿದ್ದೇನೆ. ಮಹಿಳೆಯರ ಸೂಕ್ಷ್ಮಸಂವೇದನೆಯ ಬಗ್ಗೆ ಅರಿವು ಇದೆ. ಸಂಶೋಧನೆಯ ಅಧ್ಯಯನದ ಆಧಾರದಲ್ಲಿ ಹೇಳಿಕೆ ನೀಡಿದ್ದೆ. ಕೌಟುಂಬಿಕ ವ್ಯವಸ್ಥೆಯ ಮೌಲ್ಯದ ಕುಸಿತದ ಬಗ್ಗೆ ನನ್ನ ಹೇಳಿಕೆ ನೀಡಿದ್ದೇನೆ. ಆದರೆ, ನನ್ನ ಹೇಳಿಕೆ ಉದ್ದೇಶ ತಪ್ಪಾಗಿ ಅರ್ಥೈಸಿರುವುದು ದುರದೃಷ್ಟಕರ ಎಂದು ಅವರು ತಿಳಿಸಿದ್ದಾರೆ.