ಬರೋಬ್ಬರಿ 64 ಮಂದಿಗೆ ಮದ್ಯಪಾನವು ವಿಷಾಹಾರವಾಗಿ ಬದಲಾದ ಘಟನೆಯು ರಷ್ಯಾದ ಓರೆನ್ಬರ್ಗ್ ಪ್ರಾಂತ್ಯದಲ್ಲಿ ನಡೆದಿದೆ. ಈ ಘಟನೆಯಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಘಟನೆ ಸಂಬಂಧ 27 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗೂ 7 ಮಂದಿಗೆ ಒಪಿಡಿಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ನ್ಯೂಸ್ ಏಜೆನ್ಸಿಯೊಂದು ವರದಿ ಮಾಡಿದೆ. ಮದ್ಯಪಾನ ಸೇವನೆ ಮಾಡಿದವರ ದೇಹದಲ್ಲಿ ಮಿಥನಾಲ್ ಅಂಶ ಪತ್ತೆಯಾಗಿದೆ ಎನ್ನಲಾಗಿದೆ. ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಅಡಿಯಲ್ಲಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಬಂಪರ್: 15000 ರೂ. ಹೆಚ್ಚಾಗಲಿದೆ ಸಂಬಳ
ಮದ್ಯವನ್ನು ತಯಾರು ಮಾಡುತ್ತಿದ್ದ ಪ್ರದೇಶದಲ್ಲಿ ಪೊಲೀಸರು ದಾಳಿ ನಡೆಸಿದ್ದು 1279 ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ. ಓರೆನ್ಬರ್ಗ್ ಪ್ರಾಂತ್ಯದಲ್ಲಿರುವ 11 ಜಿಲ್ಲೆಗಳಲ್ಲಿ 800 ನಕಲಿ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.
2016ರ ಡಿಸೆಂಬರ್ ತಿಂಗಳಿನಲ್ಲಿ ರಷ್ಯಾದ ಇರ್ಕ್ಟಸ್ಕ್ ಎಂಬಲ್ಲಿ ನಕಲಿ ಮದ್ಯಪಾನ ಸೇವಿಸಿ 70 ಮಂದಿ ಸಾವನ್ನಪ್ಪಿದ್ದರು.