ನಮ್ಮ ಆಪ್ತರೊಂದಿಗಿನ ಭೇಟಿಗಿಂತಲೂ ಸಂಭ್ರಮದ ಕ್ಷಣ ಈ ಜಗತ್ತಿನಲ್ಲಿ ಮತ್ತೊಂದಿಲ್ಲ. ಮನುಷ್ಯನಂತಹ ಒಬ್ಬ ಸಾಮಾಜಿಕ ಪ್ರಾಣಿಗೆ ಒಂಟಿಯಾಗಿ ಬದುಕುವುದು ಕೂಡ ಸಾವಿನ ಸಮಾನವೇ ಸರಿ. ಹಾಗಾಗಿ ಆತನಿಗೆ ಸಂಗಾತಿ, ಸಂಗಡಿಗರು ಬೇಕೇಬೇಕು. ಅದರಲ್ಲೂ ತಂದೆ ಮತ್ತು ಮಗನ ನಡುವಿನ ಬಾಂಧವ್ಯ, ಆಪ್ತತೆ, ಒಬ್ಬರನ್ನೊಬ್ಬರು ಅನುಕರಿಸುವ ರೀತಿಯೇ ವಿಶಿಷ್ಟ. ಅದು ಹೊರಗಿನವರಿಗೆ ನೋಡಲು ಚೆಂದ ಕೂಡ. ಆದರೆ, ಫ್ಲಾರಿಡಾದಲ್ಲಿ ಸ್ವಲ್ಪ ವಿಭಿನ್ನ ಮಾದರಿಯ ಮಿಲನ ಅಥವಾ ಭೇಟಿಯ ಕ್ಷಣವು ಎಲ್ಲರನ್ನೂ ಭಾವುಕರನ್ನಾಗಿಸಿದೆ.
ಜಮೀರ್ ಅಹ್ಮದ್ ಗೆ ಉತ್ತರ ಪ್ರದೇಶ ಚುನಾವಣೆ ಜವಾಬ್ದಾರಿ….? ಒವೈಸಿಗೆ ಕೌಂಟರ್ ಪ್ಲಾನ್ ರೂಪಿಸಿದ ಕಾಂಗ್ರೆಸ್ ಹೈಕಮಾಂಡ್…!
ಮಗ ಜನಿಸಿದ ಕೆಲವೇ ತಿಂಗಳಲ್ಲಿ ಅಪರಾಧ ಕೃತ್ಯವೊಂದರಲ್ಲಿ ಜಾನಿ ಜಾಸ್ಮಿನ್ಗೆ ಜೈಲು ಶಿಕ್ಷೆಯಾಯಿತು. ಮಧ್ಯದಲ್ಲಿ ಕೂಡ ಆತನನ್ನು ಕಾಣಲು ಸಣ್ಣ ಮಗನನ್ನು ಕುಟುಂಬಸ್ಥರು ಜೈಲಿಗೆ ಕರೆದೊಯ್ದಿರಲಿಲ್ಲ. ಜೈಲಿನ ಗಾಳಿ ಮಗನಿಗೆ ಸೋಕಬಾರದು ಎನ್ನುವುದು ಜಾನಿಯ ಅಭಿಪ್ರಾಯವೇ ಆಗಿತ್ತು. ಹೀಗೆ 11 ವರ್ಷಗಳ ಜೈಲು ಶಿಕ್ಷೆ ಪೂರ್ತಿಗೊಳಿಸಿ ಬಿಡುಗಡೆಯಾದ ಜಾನಿ, ಮಗನಿಗೆ ಅಚ್ಚರಿಯ ಕ್ಷಣವನ್ನು ನೀಡಲು ನಿರ್ಧರಿಸಿದ.
ಮಗನನ್ನು ರೆಸ್ಟೊರೆಂಟ್ವೊಂದರಲ್ಲಿ ಸ್ನೇಹಿತರೊಂದಿಗೆ ಸೇರುವಂತೆ ಪ್ಲಾನ್ ಮಾಡಿದ. ಮಗನಿಗೆ ಇದೊಂದು ಸ್ನೇಹಮಯ ಭೇಟಿ ಅಂತಷ್ಟೇ ತಲೆಯಲ್ಲಿ ಇತ್ತು. ಆದರೆ, ಏಕಾಏಕಿಯಾಗಿ ತನ್ನ ಸ್ನೇಹಿತರು ಹಾಗೂ ಪರಿಚಿತರ ನಡುವೆ ತಂದೆ ಜಾನಿಯನ್ನು ಮಗ ಜಾಹ್ವೊನ್ ಕಂಡ.
ಅಜೀರ್ಣ, ಮಲಬದ್ಧತೆಗೆ ಪರಿಹಾರ ನೀಡುತ್ತೆ ಈ ನೀರು
ಆತನಿಗೆ ಅಚ್ಚರಿಯೋ ಅಚ್ಚರಿ. ಜೈಲಿನಲ್ಲಿದ್ದಾರೆ ಎನ್ನಲಾದ ತಂದೆ, ಹೊಸ ಡ್ರೆಸ್ ಧರಿಸಿಕೊಂಡು ತನ್ನ ಎದುರು ಹಾಜರಾಗಿದ್ದು, ಆತನಿಗೆ ಸಂತಸವನ್ನು ನೂರು ಪಟ್ಟು ಹೆಚ್ಚಿಸಿತು. ಆತ ಆನಂದಬಾಷ್ಪದಿಂದ ಅಳತೊಡಗಿದೆ. ಈ ವಿಡಿಯೊವನ್ನು ಟ್ವಿಟರ್ನಲ್ಲಿ ‘ಗುಡ್ ನ್ಯೂಸ್ ಕರಸ್ಪಾಂಡೆಂಟ್ ‘ ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಕೂಡ ಈ ವಿಡಿಯೊಗೆ ಭಾವುಕರಾಗಿಯೇ ಪ್ರತಿಕ್ರಿಯಿಸಿ, ‘ಇದೊಂದು ಅಪೂರ್ವ ಮಿಲನ ‘ ಎಂದು ಕರೆದಿದ್ದಾರೆ.