ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೆ ಒಳಪಟ್ಟ ಯುವತಿಯೊಬ್ಬಳು ತನ್ನ ಸ್ಯಾನಿಟರಿ ನ್ಯಾಪ್ಕಿನ್ನಲ್ಲಿ ಡ್ರಗ್ಸ್ ಅನ್ನು ಬಚ್ಚಿಟ್ಟುಕೊಂಡು ಹೊತ್ತೊಯ್ದಿದ್ದಾಗಿ ಎನ್ಸಿಬಿ ತಿಳಿಸಿದೆ.
ಕ್ರೂಸ್ನಲ್ಲಿ ಡ್ರಗ್ಸ್ ತೆಗೆದುಕೊಂಡ ಸಂಬಂಧ ತನಿಖೆ ನಡೆಸುತ್ತಿರುವ ಎನ್ಸಿಬಿ ಚಿತ್ರ ನಿರ್ಮಾಪಕ ಇಮ್ತಿಯಾಜ಼್ ಖತ್ರಿಗೆ ಸಮ್ಸನ್ ಕೊಟ್ಟಿದ್ದು, ಅಕ್ಟೋಬರ್ 11ಕ್ಕೂ ಮುಂಚೆ ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ.
ಕೇಂದ್ರ ಸರ್ಕಾರದ ಈ ಉದ್ಯೋಗಿಗಳಿಗೆ ಹಬ್ಬಕ್ಕೂ ಮುನ್ನ ಭರ್ಜರಿ ʼಬಂಪರ್ʼ ಕೊಡುಗೆ
ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ನ ಚಾಲಕನನ್ನೂ ಸಹ ಎನ್ಸಿಬಿ ಶನಿವಾರ ಪ್ರಶ್ನಿಸಿದೆ. ಡ್ರಗ್ಸ್ ವಶ ಪಡಿಸಿಕೊಂಡ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರನನ್ನು ಬಂಧಿಸಲಾಗಿದೆ.
ಪ್ರಕರಣದ ಸಂಬಂಧ ಒಟ್ಟಾರೆ 19 ಮಂದಿಯನ್ನು ಎನ್ಸಿಬಿ ಬಂಧಿಸಿದೆ. ಅಕ್ಟೋಬರ್ 2ರಂದು ಇಟ್ಟುಕೊಂಡಿದ್ದ ಡ್ರಗ್ಸ್ ಪಾರ್ಟಿಯ ತನಿಖೆ ನಡೆಸುತ್ತಿರುವ ಎನ್ಸಿಬಿ, ಬಂಧಿಸಿರುವ ಆರ್ಯನ್ ಖಾನ್ ಹಾಗೂ ಏಳು ಮಂದಿ ಇತರರನ್ನು 14 ದಿನಗಳ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ನದಿ ತೀರದಲ್ಲಿದೆ ‘ಫ್ಲಡ್ ಡೈನಿಂಗ್’ ರೆಸ್ಟೋರೆಂಟ್: ಏನಿದರ ವಿಶೇಷತೆ ಗೊತ್ತಾ…..?
“ಆಪಾದಿತ ನಂ.1 ಆರ್ಯನ್ ಖಾನ್ನನ್ನು ಪಾರ್ಟಿಗೆ ಕರೆಯಲಾಗಿತ್ತು. ಆತನ ಬಳಿ ಏನೂ ಸಿಕ್ಕಿಲ್ಲ. ಬರೀ ಚಾಟ್ ಮಾಡಿದ್ದರ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ, “ಆರ್ಯನ್ ಖಾನ್ ಪರ ವಕೀಲ ಸತೀಶ್ ಮನೇಶಿಂಧೆ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ಒಂದರಲ್ಲಿ ಆಪಾದಿತನ ಪರ ವಾದ ಮಂಡಿಸಿದ್ದಾರೆ.