ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಲು ಮುಂದಾಗಿದೆ ಎನ್ನಲಾಗುತ್ತಿದೆ. ಉತ್ತರ ಪ್ರದೇಶದ ಚುನಾವಣಾ ಜವಾಬ್ದಾರಿಯನ್ನು ಜಮೀರ್ ಗೆ ನೀಡಲು ಎಐಸಿಸಿ ಪ್ಲಾನ್ ಮಾಡಿರುವ ಸಾಧ್ಯತೆ ಇದೆ.
ʼಅರ್ಧನಾರೀಶ್ವರʼ ಮೂರ್ತಿಯೊಂದಿಗೆ ದುರ್ಗಾ ಪೂಜೆ ಸಂಭ್ರಮಿಸುತ್ತಿರುವ ತೃತೀಯ ಲಿಂಗಿಗಳು
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕಚೇರಿಯಿಂದಲೇ ಜಮೀರ್ ಅಹ್ಮದ್ ಅವರಿಗೆ ಕರೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಜಮೀರ್ ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಈಗಾಗಲೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಜಮೀರ್ ಅಹ್ಮದ್ ಅವರನ್ನು ಪರಿಚಯಿಸಿದ್ದು, ಉತ್ತರ ಪ್ರದೇಶ ಚುನಾವಣಾ ಜವಾಬ್ದಾರಿಯನ್ನು ಜಮೀರ್ ಗೆ ನೀಡಲು ಪ್ರಿಯಾಂಕಾ ಗಾಂಧಿ ಕೂಡ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
ಈ ಮೂಲಕ ಉತ್ತರ ಪ್ರದೇಶ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳು ಹೆಚ್ಚಿರುವ ಕ್ಷೇತ್ರಗಳಲ್ಲಿ ಶಾಸಕ ಜಮೀರ್ ಅಹ್ಮದ್ ಅವರಿಂದ ಪ್ರಚಾರ ನಡೆಸುವ ಜವಾಬ್ದಾರಿ ವಹಿಸಿ, ಅಸಾದುದ್ದೀನ್ ಒವೈಸಿಗೆ ಕೌಂಟರ್ ನೀಡಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.