ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಎಕ್ಪಾಲ್ ಬೋರ್ ಪ್ರದೇಶದಲ್ಲಿ ತನ್ನ ಮನೆಯಲ್ಲಿ ‘ವಿಶೇಷ’ ತರಗತಿ ಪಾಠ ಕೇಳಲು ಬಂದಿದ್ದ ವಿದ್ಯಾರ್ಥಿನಿಗೆ ಟ್ಯೂಷನ್ ಶಿಕ್ಷಕ ಕಿರುಕುಳ ನೀಡಿದ್ದಾನೆ.
16 ವರ್ಷದ ಬಾಲಕಿಯ ಆರೋಪದ ಮೇಲೆ ಪೊಲೀಸರು 40 ವರ್ಷದ ಜೀವಶಾಸ್ತ್ರ ಶಿಕ್ಷಕನನ್ನು ಬಂಧಿಸಿದ್ದಾರೆ.
ಸಂತ್ರಸ್ತೆ ತನ್ನ ಪರೀಕ್ಷೆಗೆ ಮುಂಚಿತವಾಗಿ ಟ್ಯೂಷನ್ ತೆಗೆದುಕೊಳ್ಳಲು ಆರೋಪಿಯ ಮನೆಗೆ ಹೋಗಿದ್ದಳು. ಬಾಲಕಿಯ ತಂದೆಯ ದೂರಿನ ಮೇರೆಗೆ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮ್ಯಾಜಿಸ್ಟ್ರೇಟ್ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಲು ಹುಡುಗಿಯನ್ನು ಕೇಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಶಿಕ್ಷಕನ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ), POCSO ಮತ್ತು ಕಿರುಕುಳದ ಸೆಕ್ಷನ್ ಅಡಿಯಲ್ಲಿ ದಾಖಲಿಸಲಾಗಿದೆ.
ಸಂತ್ರಸ್ತೆಯ ತಂದೆ ಅಕ್ಟೋಬರ್ 7 ರಂದು ಪೊಲೀಸರನ್ನು ಸಂಪರ್ಕಿಸಿದ್ದು, ತನ್ನ ಮಗಳೊಂದಿಗೆ ಟ್ಯೂಷನ್ ಶಿಕ್ಷಕ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಶಿಕ್ಷಕ ವಿದ್ಯಾರ್ಥಿನಿಯ ಅನುಚಿತವಾಗಿ ಸ್ಪರ್ಶಿಸಿ ಬಲವಂತವಾಗಿ ಮುತ್ತು ಕೊಡಲು ಪ್ರಯತ್ನಿಸಿದ ಎಂದು ತಂದೆ ಆರೋಪಿಸಿದ್ದಾರೆ. ವಿದ್ಯಾರ್ಥಿನಿಯ ಒಂಟಿತನದ ಲಾಭವನ್ನು ಪಡೆಯಲು ಪ್ರಯತ್ನಿಸಿದ ಶಿಕ್ಷಕ ಮನೆಯಲ್ಲಿ ಅವಳ ಟ್ಯೂಷನ್ ತರಗತಿಗಳಲ್ಲಿ ಒಬ್ಬಳೇ ಕೋಣೆಯಲ್ಲಿ ಉಳಿಯುವಂತೆ ತಿಳಿಸಿದ್ದ ಬಂದರು ಡಿಸಿ ಜಾಫರ್ ಅಜ್ಮಲ್ ಕಿದ್ವಾಯಿ ಹೇಳಿದ್ದಾರೆ.